ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ: ಕ್ರಮಕ್ಕೆ ಜೆಡಿಎಸ್ ವಿದ್ಯಾರ್ಥಿ ಘಟಕ ಒತ್ತಾಯ

ಲಕ್ಷ್ಮೇಶ್ವರ: ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಳಪೆ ಮಟ್ಟದ್ದಾಗಿದ್ದು, ಅದನ್ನು ತಡೆಗಟ್ಟಬೇಕೆಂದು ಜಾತ್ಯಾತೀತ ಜನತಾದಳ ವಿದ್ಯಾರ್ಥಿ ಘಟಕದಿಂದ ಉಪ‌ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಕಯಕುಮಾರ ಆಲೂರ ಮಾತನಾಡಿ, ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 3 ಲಕ್ಷ ರೂಪಾಯಿ ಮಂಜೂರ ಆಗಿದ್ದು ಶಾಲೆಯ ಆಡಳಿತ ಮಂಡಳಿ ತಮ್ಮ ಇಷ್ಷ ಬಂದ ಹಾಗೆ ಕಾಮಗಾರಿ ಮಾಡುತ್ತಿದೆ. ಹೀಗಾಗಿ ಕಳಪೆ ಮಟ್ಟದಿಂದ ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಶಾಲೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಕಳಪೆ ಕಾಮಗಾರಿ ನಡೆಸಿದ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಗರಾಜ ನಾವ್ಹಿ, ನಾಗರಾಜ ವಾಲಿಕಾರ, ಹನಮಂತ ದೊಡ್ಡಮನಿ, ಜಗದೀಶ ಗುಡಿ, ಪ್ರವೀಣ ಅಂಗಡಿ‌ ಇದ್ದರು.

Exit mobile version