ಗಜೇಂದ್ರಗಡ: ಸ್ಮಶಾನದಲ್ಲಿ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಇನ್ನೇನು ಕೆಲ ಕ್ಷಣದಲ್ಲಿ ಅಂತ್ಯಕ್ರಿಯೇ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದೆ ಬೇರೆ.
ವೃದ್ಧ ಅಡಿವೆಪ್ಪ ಮೇಟಿ ಸಾವಿನಿಂದ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಸ್ಮಶಾನದಲ್ಲಿ ಇನ್ನೇನು ಅಂತಿಮ ವಿಧಿವಿಧಾನಗಳು ನಡೆದಿದ್ದವು. ಆದರೆ ಆ ವೇಳೆ ಚಿಕ್ಕಪ್ಪನ ಅಂತ್ಯಕ್ರಿಯೇಗೆ ಬಂದಿದ್ದ ಮಗ ಹೃದಯಾಗಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಮೂಲಕ ಮೊದಲೇ ಶೋಕದಲ್ಲಿ ಮುಳಗಿದ ಕುಟುಂಬಕ್ಕೆ ಮತ್ತೊಂದು ಶೋಕ ಆವರಿಸಿದೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ದಿಂಡೂರು ಗ್ರಾಮದಲ್ಲಿ ಇಂತಹದ್ದೊಂದು ಹೃದಯ ಕಲಕುವ ಘಟನೆ ನಡೆದಿದೆ. ಮಲ್ಲಪ್ಪ ಹನಮಪ್ಪ ಮೇಟಿ(72) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ತನ್ನ ಚಿಕ್ಕಪ್ಪ ಅಡಿವೆಪ್ಪ ಮೇಟಿ ಅಂತ್ಯಕ್ರೀಯೆ ವೇಳೆಯಲ್ಲಿ ಹೃದಯಾಘಾತವಾಗಿ ಮಲ್ಲಪ್ಪ ಸಾವನ್ನಪ್ಪಿದ್ದಾರೆ.
