ಮುಳಗುಂದ ಅಬ್ಬಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ: ಸಾರ್ವಜನಿಕರ ಸಯೋಗದಲ್ಲಿ ಕೆರೆ ಅಭಿವೃದ್ದಿಗೆ ಸಲಹೆ.

gadag mulagunda dc

ಮುಳಗುಂದ ಅಬ್ಬಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ ವೀಕ್ಷಣೆ. ಸಾರ್ವಜನಿಕರ ಸಯೋಗದಲ್ಲಿ ಕೆರೆ ಅಭಿವೃದ್ದಿಗೆ ಸಲಹೆ.

ಮುಳಗುಂದ : ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮಳೆಯಿಂದ ಭರ್ತಿಯಾಗಿರುವ ಅಬ್ಬಿ ಕೆರೆ ವೀಕ್ಷಣೆ ಮಾಡಿದರು.

ನಂತರ ಸ್ಥಳಿಯ ಮುಖಂಡರೊಂದಿಗೆ ಚರ್ಚಿಸಿದ ಅವರು ಜಿಲ್ಲೆಯಲ್ಲಿ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕೆರೆಗಳನ್ನು ಜನಪ್ರತಿನಿಧಿಗಳು, ಸಾರ್ವಜನಿಕರು ಕೆರೆ ಅಭಿವೃದ್ದಿ ಸಮಿತಿ ರಚಿಸಿಕೊಂಡು ಕೆರೆಗಳ ಅಭಿವೃದ್ದಿಗೆ ಮುಂದಾಗಬೇಕು. ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ದಿಸುವುದರ ಜತೆಗೆ ರೈತರಿಗೂ ನೀರಿನ ಬವಣೆ ನೀಗಲಿದೆ. ಈಗಾಗಲೇ ಮಳೆಯಿಂದ ಕೆರೆಗಳು ಭರ್ತಿಯಾಗಿದ್ದು ಕೆರೆ ದಡದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿ ನೆಡಬೇಕು ಎಂದು ಸಲಹೆ ನೀಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಸ್ಥಳಿಯ ಪಟ್ಟಣ ಪಂಚಾಯ್ತಿಯ ಒಟ್ಟು 7 ಕರೆಗಳ ಪೈಕಿ 6 ಕೆರೆಗಳನ್ನ ಒತ್ತುವರಿ ತೆರವು ಮಾಡಿದ್ದು ಇನ್ನೂಳಿದ ಒಂದು ಕಂದಾಯ ಇಲಾಖೆಯ ಕೆರೆ ಸೇರಿ 2 ಕೆರೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಕೃಷಿ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿನ ಬೆಳೆಗಳ ಸಮೀಕ್ಷೆ ನಡೆಸಿದ್ದು ವರದಿ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವದು. ಮತ್ತು ಮಳೆಯಿಂದ ಹಾನಿಗೇಡಾದ ಮನೆಗಳ ಸಮೀಕ್ಷೆ ನಡೆಸಿ ಎನ್‌ಡಿಆರ್ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಿಸುತ್ತೇವೆ. ತಾಲೂಕಿನಲ್ಲಿ ಮಳೆಯಿಂದ ರಸ್ತೆಗಳು ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ಲೋಕೋಪಯೋಗಿ ಇಲಾಖೆ ರಿಪೇರಿ ಕಾಮಗಾರಿಗೆ ಸೂಚಿಸಲಾಗಿದೆ. ಮಳೆ ಕಡಿಮೆಯಾದ ನಂತರ ಕಾಮಗಾರಿ ಕೈಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ರುದ್ರೇಶ, ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಮುಖಂಡರಾದ ಬಸವರಾಜ ಸಂಕಾಪೂರ, ಪಟ್ಟಣ ಪಂಚಾಯ್ತಿ ಸದಸ್ಯರಾದ ವಿಜಯ ನೀಲಗುಂದ, ಎನ್.ಆರ್.ದೇಶಪಾಂಡೆ, ಕೆ.ಎಲ್.ಕರಿಗೌಡ್ರ, ಮಹಾಂತೇಶ ನೀಲಗುಂದ, ಎಸ್.ಸಿ.ಬಡ್ನಿ, ಬಸವರಾಜ ಹಾರೋಗೇರಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ಮೊದಲಾದವರು ಇದ್ದರು.

Exit mobile version