ಮುಳಗುಂದ : ಮರುಜೀವ ಪಡೆದ ಪಟ್ಟಣಶೆಟ್ಟಿ ಕೆರೆ

ಧರ್ಮಸ್ಥಳ ಯೋಜನೆ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

ಮುಳಗುಂದ : ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊಂಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಧರ್ಮಸ್ಥಳ  ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

     ರಿ.ಸ.ನಂ 572 ರಲ್ಲಿರುವ 6 ಎಕರೆ 3 ಗುಂಟೆ ಪಟ್ಟಣಶೆಟ್ಟಿ ಕೆರೆ ಸಾಕಷ್ಟು ಒತ್ತುವರಿಯಾಗಿ ಕೆರೆ ಅಂಗಳವೆ ಮಾಯವಾಗಿತ್ತು. ಸುತ್ತಲು ಜಾಲಿಬೆಳೆದು, ಹೂಳು ತುಂಬಿಕೊಂಡಿತ್ತು. ಹಸಿರು ನ್ಯಾಯಾಧಿಕರಣ ಹಾಗೂ ಕೆರೆ ಅಭಿವೃದ್ದಿ ಪ್ರಾಧಿಕಾರದ ಆದೇಶದನ್ವಯ 2019 ರಲ್ಲಿ ಸ್ಥಳೀಯ ಪಟ್ಟಣ ಪಂಚಾಯ್ತಿ ವತಿಯಿಂದ ಸರ್ವೇ ನಡೆಸಿ ಅಂದಾಜು 2 ಎಕರೆ ಒತ್ತುವರಿ ಜಾಗವನ್ನ ತೆರವುಗೊಳಿಸಿ ಗಡಿ ಗುರುತಿಸಿದರು. ನಂತರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ನಮ್ಮ ಗ್ರಾಮ ನಮ್ಮ ಕೆರೆ ಯೋಜನೆ ಅಡಿ, ಕೆರೆ ಅಭಿವೃದ್ದಿ ಸಮಿತಿ ಹಾಗೂ ಪಟ್ಟಣ ಪಂಚಾಯ್ತಿ ಸಹಯೋಗದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಸಸತ 1 ತಿಂಗಳ ಬಳಿಕ ಕೆರೆ ಚಿತ್ರಣವೇ ಬದಲಾಗಿದೆ. ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಸುತ್ತಲು 10 ಅಡಿ ಎತ್ತರದ ಏರಿ ಹಾಕಿದೆ. ಮೊದಲಿಗಿಂತ ನೀರಿನ ಸಂಗ್ರಹ ಮಟ್ಟವನ್ನ ಹತ್ತುಪಟ್ಟು ಹೆಚ್ಚಿಸಲಾಗಿದೆ. ಕೆರೆಯ ಸುತ್ತಲು ವಾಯು ವಿಹಾರಕ್ಕೆ ಅನುಕೂಲವಾಗುಂತೆ ರಸ್ತೆ ನಿರ್ಮಿಸಲಾಗಿದೆ.

     ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ಸಹಾಯದಿಂದ ನಮ್ಮೂರ ಕೆರೆಗೆ ಮರುಜೀವ ಬಂದಂತಾಗಿದೆ. ಕೆರೆ ಹೂಳೆತ್ತುವ ವೇಳೆ ಬಂದ ಮಣ್ಣನ್ನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಫಲವತ್ತಾದ ಮಣ್ಣನ್ನ ಹೊಲಗಳಿಗೆ ಬಳಸಿಕೊಳ್ಳಲಾಗಿದೆ. ಕೆರೆಗೆ ಹರಿದು ಬರುವ ನೀರಿನ ಮೂಲವನ್ನ ಅಭಿವೃದ್ದಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಇನ್ನಷ್ಟು ಅನುದಾನದ ಕೊರತೆ ಇದ್ದು, ಜಿಲ್ಲಾಡಳಿತ ಯೋಜನೆ ರೂಪಿಸಿದರೆ ಅದುಕೂಡಾ ಸಾಕಾರವಾಗಲಿದೆ. ಎಂದು ಕೆರೆ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ವಿಜಯ ನೀಲಗುಂದ ಹೇಳಿದರು.

    ಕೆರೆಗಳ ರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಇದರಿಂದ ಅಂತರ್ಜಲ ವೃದ್ದಿ, ಹಸಿರು ಪರಿಸರ ಅಭಿವೃದ್ದಿಪಡಿಸಲು ಸಾಧ್ಯವಾಗುತ್ತಿದೆ. ಈ ದೆಸೆಯಲ್ಲಿ ಪಟ್ಟಣದಲ್ಲಿ  ಪಟ್ಟಣದ ಎಲ್ಲ ಕೆರೆಗಳ  ಸರವೇ ನಡೆಸಿ ಒತ್ತುವರಿ ತೆರುವು ಮಾಡಿ ಗಡಿ ಗುರುತಿಸಲಾಗಿದೆ. ಪಟ್ಟಣಶೆಟ್ಟಿ ಕೆರೆ ಧರ್ಮಸ್ಥಳ ಗ್ರಾಮಾಬೀವೃದ್ದಿ ಸಹಾಯಧನದಿಂದ ಅಭಿವೃದ್ದಿ ಮಾಡಲಾಗಿದೆ. ಎಂದು ಪಪಂ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

     ಈ ಸಂಧರ್ಭದಲ್ಲಿ ಕೆರೆ ಅಭಿವೃದ್ದಿ ಸಮಿತಿ ಸದಸ್ಯರಾದ ರಾಮಣ್ಣ ಕಮಾಜಿ, ಅಶೋಕ ಹುಣಸಿಮರದ, ಎನ್.ಆರ್.ದೇಶಪಾಂಡೆ, ಕೋರಿ ಹಾಗೂ ಗ್ರಾಮಾಭಿವೃದ್ದಿಯ ಸೇವಾ ನಿರತರು ಇದ್ದರು.

Exit mobile version