ಶಾರ್ಜಾ : ಮನೀಶ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 143 ರನ್ ಗಳ ಗುರಿ ನೀಡಿದೆ.
ಉತ್ತಮವಾಗಿ ಬ್ಯಾಟ್ ಬೀಸಿದ ಮನೀಶ್ ಪಾಂಡೆ ಅರ್ಧಶತಕ ಸಿಡಿಸಿ ಮಿಂಚಿದರು. ಅಷ್ಟೇ ಅಲ್ಲದೇ, ವಿಕೆಟ್ ಕಳೆದುಕೊಳ್ಳುತ್ತಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ಅವರು 38 ಎಸೆತದಲ್ಲಿ 51 ರನ್ ಸಿಡಿಸಿ ತಂಡದ ಚೇತರಿಕೆಗೆ ಕಾರಣವಾದರು. ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಇ ವೃದ್ಧಿಮಾನ್ ಸಹಾ ಅವರು 31 ಎಸೆತಕ್ಕೆ 30 ರನ್ ಪೇರಿಸಿದರು.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳು ಶಿಶ್ತು ಬದ್ಧದಾಳಿ ನಡೆಸಿ, ಹೈದರಾಬಾದ್ ತಂಡಕ್ಕೆ ಆರಂಭದಿಂದಲೂ ಶಾಕ್ ನೀಡಿದರು. ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ಒಂದು ವಿಕೆಟ್ ಕಳೆದುಕೊಂಡು 40 ರನ್ ಸೇರಿಸಿತು.
ವಾರ್ನರ್ ಮತ್ತು ಪಾಂಡೆ ಮಂದಗತಿಯ ಆಟವಾಡಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ 30 ಎಸೆತಗಳಲ್ಲಿ 36 ರನ್ ಗಳಿಸಿದ್ದ ವಾರ್ನರ್ ಅವರು ಸಿಂಪಲ್ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಆ ನಂತರ ಸಹಾ ಮತ್ತು ಪಾಂಡೆ ಸೇರಿಕೊಂಡು ತಂಡಕ್ಕೆ ಆಸರೆಯಾದರು.
ಅಲ್ಲದೇ, ಇಬ್ಬರೂ ಅರ್ಧ ಶತಕದ ಜೊತೆಯಾಟ ಆಟ ಆಡಿದರು. ಈ ಜೋಡಿ 41 ಬೌಲ್ ಗೆ 51 ರನ್ ಸಿಡಿಸಿತು. ಮನಿಷ್ ಪಾಂಡೆಯವರು ತಮ್ಮ ಅರ್ಧಶತಕ ಸಿಡಿಸಿ ಆಂಡ್ರೆ ರಸ್ಸೆಲ್ ಅವರ ಬೌಲಿಂಗ್ಗೆಆ ಸುಲಭ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಸಹಾ ರನ್ ಔಟ್ ಆದರು.
