ಗ್ರಾಪಂ ಚುನಾವಣೆ : ಮತಗಟ್ಟೆ ಅಧಿಕಾರಿ ನೇಮಕಕ್ಕೆ ನಿಯಮಗಳು

grama panchayati ellection

ಇಂಧನ ಇಲಾಖೆಯ ಖಾಸಗಿಕರಣ : ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

ಬೆಂಗಳೂರು: ಮುಂಬರುವ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2020ರ ಸಂಬಂಧ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಸಿಬ್ಬಂಧಿಗಳನ್ನು ನೇಮಕ ಮಾಡಬೇಕಿರುವುದರಿಂದ   ಈ ಬಗ್ಗೆ ಚುನಾವಣಾ ಆಯೋಗ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದೆ.

ಅವಶ್ಯಕವಿರುವ ಸಿಬ್ಬಂಧಿಗಳ ಹಾಗೂ ಲಭ್ಯವಿರುವ ಸಿಬ್ಬಂಧಿಗಳ ಬಗ್ಗೆ ಅಂಶಗಳನ್ನು ಕ್ರೂಢಿಕರಿಸಿಕೊಳ್ಳಲು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ/ ಸಿಬ್ಬಂಧಿಗಳನ್ನು ಚುನಾವಣಾ ಕಾರ್ಯಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮತಗಟ್ಟೆ ಅಧಿಕಾರಿಗಳ ನೇಮಕಕ್ಕೆ ಸೂಚನೆ

  1. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ(PRO), ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡುವುದು. ಗ್ರಾಮ ಪಂಚಾಯತಿ ಯಾವುದೇ ಒಂದು ಕ್ಷೇತ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳಿದ್ದಲ್ಲಿ ಅಂತಹ ಮತಗಟ್ಟೆಗಳಿಗೆ ನಾಲ್ಕು ಜನ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದು.ಅಧ್ಯಕ್ಷಾಧಿಕಾರಿ ಮತ್ತು ಮೊದಲನೇ ಮತಗಟ್ಟೆ ಅಧಿಕಾರಿಗಳು ಸ್ವಂತ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರಾಗಿರತಕ್ಕದ್ದು, ಆದರೆ ನಿಯೋಜಿಸಲ್ಪಡುವ ಗ್ರಾಮ ಪಂಚಾಯತಿ ಮತಗಟ್ಟೆಯವರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಎಲ್ಲ ಅಧಿಕಾರಿ/ಸಿಬ್ಬಂಧಿಗಳ ರ್ಯಾಂಡ್ ಮೈಸೇಷನ್ ಪ್ರಕ್ರಿಯೇ ಮಾಡಲನುವಾಗುವಂತೆ ಸದರಿಯವರ ವಿವರಗಳು ಹೆಚ್.ಆರ್.ಎಮ್.ಎಸ್ ತಂತ್ರಾಂಶದಲ್ಲಿ ದಾಖಲಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳತಕ್ಕದ್ದು.
  2. ಹೆಚ್ಚುವರಿ ಮತಗಟ್ಟೆ ಸಿಬ್ಬಂಧಿಯೂ(ಮೀಸಲು) ತಾಲೂಕಿನ ಒಟ್ಟು ಮತಗಟ್ಟೆಗಳ ಸಂಖ್ಯೆಯ ಶೇ.10ರಷ್ಟನ್ನು ಮೀರುವಂತಿಲ್ಲ.
  3. ಅಧ್ಯಕ್ಷಾಧಿಕಾರಿ ಮತ್ತು ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಪ್ರಾರಂಭದಿಂದ ಮುಕ್ತಾಯದವರೆಗಿನ ಚುನಾವಣಾ ಪ್ರಕ್ರಿಯೇ ಬಗ್ಗೆ ತರಬೇತಿಯನ್ನು ಆಯೋಗವು ಹೊರಡಿಸಿರುವ ಎಸ್.ಒ.ಪಿಯಲ್ಲಿನ ಮಾರ್ಗಸೂಚಿಯನುಸಾರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನೀಡುವುದು.
Exit mobile version