ನಂಬಿದ್ರ ನಂಬ್ರಿ-ಬಿಟ್ರಬಿಡ್ರಿ: 66 ವರ್ಷದ ಹೆಣ್ಮಗಳಿಗೆ 18 ತಿಂಗಳದಾಗ 8 ಮಕ್ಕಳು ಹುಟ್ಟ್ಯಾವು!

baby chil govt

ನಂಬಿದ್ರ ನಂಬ್ರಿ-ಬಿಟ್ರಬಿಡ್ರಿ: 66 ವರ್ಷದ ಹೆಣ್ಮಗಳಿಗೆ 18 ತಿಂಗಳದಾಗ 8 ಮಕ್ಕಳು ಹುಟ್ಟ್ಯಾವು!

ಸತ್ತವ್ರು ಬದಕಿದ್ದು, ಬದುಕಿದವರು ಸತ್ತಿದ್ದು ಇಂಥ ಅದೆಷ್ಟ್ ಘಟನಾ ನಾವು ಕೇಳಿವಿ, ನೋಡಿವಿ. ಆದ್ರ ಎಂತೆಂಥ ಚಿತ್ರ-ವಿಚಿತ್ರ ಘಟನೆನಾ ನಾವು ಕೇಳಿವಿ, ನೋಡಿವಿ. ಆದ್ರ ಈ ಘಟನಾ ಮಾತ್ರ ನಾವು ಎಂದು ಕಾಣದ್ದು, ಕೇಳದ್ದು ಅಂದ್ರು ತಪ್ಪಾಗ್ಲಿಕ್ಕಿಲ್ಲ.

ಸರ್ಕಾರದ ಯೋಜನಾದ ಸಲುವಾಗಿ ಮಂದಿ ಏನೆಲ್ಲ ಮಾಡ್ತಾರ ಅನ್ನೋದಕ್ಕ ಇದೊಂದು ಉದಾಹರಣೆ. ಆದ್ರ  ಸುದ್ದಿ ಓದಿದ್ರ ಓದಿದವ್ರಿಗೂ ದಿಗಿಲು ಬಿದ್ದಂಗ್ ಆಕ್ಕೈತಿ.

ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಊರವೊಂದರೊಳಗ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯೊಳಗ ಇಂತಹ ಭಯಂಕರ ದುರುಪಯೋಗವೊಂದು ನಡದೈತಿ. 66 ವರ್ಷದ ಹೆಣ್ಮಗಳೊಬ್ಬಳಿಗೆ 18 ತಿಂಗಳೊಳಗ 8 ಮಕ್ಕಳಾಗ್ಯಾವಂತ! ಇಲ್ಲಿ 50 ಹೆಣ್ಮಕ್ಕಳು ರಾಷ್ಟ್ರೀಯ ಮಾತೃತ್ವ ಯೋಜನೆಯೊಳಗ ತಿಂಗಳಿಗೆ ಒಂದು ವರ್ಷಕ್ಕ 1,400 ಪಡಿದಾರಂತ! ನಿಜವಾದ ಫಲಾನುಭವಿಗಳಿಗೆ ಯೋಜನಾ ಲಾಭ ಸಿಗದ ಬ್ಯಾರೆಯವರು ಯೋಜನೆಯ ಲಾಭ ಪಡೆದುಕೊಳ್ಳುತಿದ್ರು.

ಶಾಂತಿದೇವಿ ಅನ್ನೋ ಹೆಣ್ಮಗಳ ಸಣ್ ಮಗನಿಗಿಂತ 20 ವರ್ಷಕ್ಕಿಂತ ಹೆಚ್ಚಾಗ್ಯಾವು. ಆದ್ರ ಆರೋಗ್ಯ ಇಲಾಖೆಯಿಂದ 2019 ರಿಂದ ಇಲ್ಲಿತಂಕ ರೂ. 1,400 ರಂಗ 6 ಸಲ ಬಂದೈತಿ. ಆಕಿಗೆ ವೃದ್ಯಾಪ್ಯ ವೇತನನೂ ಸಿಗತೈತ್ಯಂತ.

ಸಮುದಾಯ ಸೇವಾ ಕೇಂದ್ರ(ಸಿ.ಎಸ್.ಪಿ)ಯ ಕಾರ್ಯನಿರ್ವಾಹಕ ಸುಶಿಲ್ ಕುಮಾರ್ ಈ ಪ್ರಕರಣ ಬೆಳಕಿಗೆ ಬರತಿದ್ದಂಗ ತಲಿ ಮರಿಸಿಕೊಂಡಾರಂತ. ಜಿಲ್ಲಾಧಿಕಾರಿಗಳ ನೇತೃತ್ವದೊಳಗ ನಾಲ್ಕು ಸದಸ್ಯರ ತಂಡದಿಂದ ತನಿಖೆ ನಡಿಸಬೇಕು ಅಂತ ಮುಜಾಫರ್ ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಆದೇಶ ಮಾಡ್ಯಾರ.

Exit mobile version