ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

law wife divorce

ಡಿವೋರ್ಸ್ ಗೆ ಕಾರಣವೇನು ಗೊತ್ತಾ?

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..

ಲಕ್ನೋ: ನನ್ ಗಂಡ ಕುಡದ್ ಬಂದ ಜಗಳಾಡ್ತಾನ, ನಂಗ್ ದಿನಾ ಹೊಡೊತಾನ, ವರದಕ್ಷಿಣಿ ಕೇಳ್ತಾನ, ಮನಿಗೆ ದುಡದ್ ಹಾಕ್ವಲ್ಲ ಇಂಥ ಕಾರನಕ್ಕ ಭಾಳ್ ಮಂದಿ ಹೆಣ್ಮಕ್ಕಳ ಸಂಸಾರ ಮುರಗಡೆ ಮಾಡಿಕೊಳ್ಳಾದ ಲೋಕರೂಢಿ. ಆದ್ರ ಇಲ್ಲೊಂದು ಪ್ರಕರಣ ಭಾಳ್ ವಿಶೇಷ ಐತಿ ನೋಡ್ರಿ.

ಭಾಳ್ ಮಂದಿ ಹೆಣ್ಮಕ್ಕಳು ಗಂಡನ ಜಗಳಕ್ಕ ಹೈರಾಣಾಗಿರ್ತಾರಾ. ಆದ್ರೆ ಇಲ್ಲಿ ಒಬ್ಬಾಕಿ ನನ್ ಗಂಡ ನನ್ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳ. ಅಂದ್ಹಂಗ ಇದು ತಮಾಷೆ ಅಲ್ಲರಿ ಅಸಲಿ ಹಕೀಕತ್ ಐತಿ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯೊಳಗ ಈ ಘಟನಾ ನಡದೈತಿ ನೋಡ್ರಿ. ತನ್ನ ಗಂಡ ತನ್ನ ಜೊತಿ ಜಗಳ ಆಡಲ್ಲ, ತನಗ ಭಾಳ್ ಪ್ರೀತಿ ಮಾಡ್ತಾನ ಅಂತ ಮದಿವ್ಯಾಗ 18 ತಿಂಗಳದಾಗ ಈಕೆ ಕೋರ್ಟ್ ಕಟ್ಟಿ ಹತ್ಯಾಳ. ಶರಿಯಾ ಕೌಟುಂಬಿಕ ನ್ಯಾಯಾಲಯದೊಳಗ ಅರ್ಜಿ ಸಲ್ಲಿಸ್ಯಾಳ.

ಅರ್ಜಿ ವಿಚಾರಣೆ ಹೊತ್ನ್ಯಾಗ ಡಿವೋರ್ಸ್ ಗೆ ಕಾರಣ ನು ಅಂತ ಕೇಳದಾಗ ನನ್ನ ಗಂಡ ನನ್ನ ಕೂಡ ಜಗಳಾನಾ ಆಡಂಗಿಲ್ಲ. ನನಗ ಭಾಳ್ ಪ್ರೀತಿ ಮಾಡ್ತಾನ ಅಂತ ಕಾರಣಾ ಹೇಳ್ಯಾಳ. ಇದನ್ನ ಕೇಳಿದ ನಮ್-ನಿಮಗ ದಿಗಿಲ್ ಬಿದ್ದಂಗಾಗೈತಿ. ಇನ್ನ ಜಡ್ಜ್ ಸಾಹೇಬ್ರಂತೂ ಕಕ್ಕಾಬಿಕ್ಕಿಯಾಗಿದ್ರೂ ಅನಿಸುತ್ತಾ. ಈ ಕಾರಣ ಕೇಳಿದ ಜಡ್ಜ್ ಸಾಹೇಬ್ರು ಡಿವೋರ್ಸ್ ಗೆ ಇದು ಸರಿಯಾದ ಕಾರಣ ಅಲ್ಲ ಅಂತ ಅರ್ಜಿ ವಜಾ ಮಾಡ್ಯಾರ.

ಕೋರ್ಟ್ ಅರ್ಜಿ ತಿರಸ್ಕಾರ ಮಾಡಿದ್ ಮ್ಯಾಲ ಈ ಹೆಣ್ ಮಗಳು ಸುಮ್ಮನಾಗ್ಲಿಲ್ಲ. ತನ್ನ ಊರಾನ್ ಪಂಚಾಯಿತಿಯಾಗ ಚರ್ಚೆ ಮಾಡ್ಯಾಳ. ದರ್ ಬಗ್ಗೆ ಊರಿನ್ ಹಿರಿಯಾರಿಗೂ ಈ ಪ್ರಕರಣ ತಲಿನೋವಾಯಿತಂತ.

ಗಂಡನ್ ಪ್ರೀತಿ ನನಗೆ ಸಹಿಸಿಕೊಳ್ಳಾಕ ಆಗ್ತಿಲ್ಲ. ನನ್ ಗಂಡ ಎಂದೂ ನನ್ನ ಮ್ಯಾಲ ಒದರ್ಯಾಡಿಲ್ಲ. ಯವುದ ವಿಷಯದ್ ಬಗ್ಗೆ ನಂಗ ನಿರಾಸೆ ಮಾಡಿಲ್ಲ. ಇಂಥ ವಾತಾವರಣದಿಂದ ನಂಗ ಉಸಿರ್ ಕಟ್ಟಿದಂಗಾಗೈತಿ. ಒಮ್ಮೆಮ್ಮೆ ಅವನ ಅಡುಗಿ ಮಾಡಿ ನನಗ ಊಟಕ್ ಕೊಡ್ತಾನ. ಮನೆ ಕೆಲಸ ಮಾಡಾಕೂ ನನ್ ಗಂಡನ ಸಹಾಯ ಮಾಡ್ತಾನಾ. ಮದುವ್ಯಾಗಿ 18 ತಿಂಗಳದ್ ಹೊತ್ತಾದ್ರು ಇಲ್ಲಿತಂಕಾ ನನ್ ಗಂಡ ದ್ ಸಲಾನೂ ಜಗಳಾಡಿಲ್ಲ ಅಂತ ಈ ಹೆಣ್ಮಗಳ ಹೇಳ್ಕೊಂಡಾಳ.

ಯಪ್ಪಾ ಏನ್ ಪುಣ್ಯಾತ್ ಗಿತ್ತಿ ಅಂತಿನಿ. ಒಳ್ಳೆ ಗಂಡನ್ ಪಡಿಬೇಕಂದ್ರ ಪುಣ್ಯಾ ಮಾಡಿರಬೇಕು ಅಂತ ಭಾಳ್ ಮಂದಿ ಹೇಳ್ತಾರ. ತನ್ ಮಗಳಿಗೆ ಚುಲೋ ಗಂಡ್ ಸಿಗ್ಲಿ ಅಂತ ಹೆಣ್ ಹೆತ್ತವ್ರು ಕಂಡ್ ಕಂಡ್ ದೇವ್ರಿಗೆ ಹರಿಕಿ ಹೊತ್ತಿರ್ತಾರ. ಆದ್ರ ಈ ಕೇಸ್ ಸ್ವಲ್ಪ ಭಿನ್ನಾಗೈತಿ. ಗಂಡ್ ಹೆಚ್ಚಿಗಿ ಪ್ರೀತಿ ಮಾಡ್ತಾನ ತನ್ನ ಜೊತಿ ಜಗಳಾ ಆಡಂಗಿಲ್ಲ ಅನ್ನೋ ಕಾರಣಕ್ಕ ಡಿವೋರ್ಸ್ ಕೇಳಿದ್ ಆಶ್ಚರ್ಯದ್ ವಿಷಯಾ ಆಗೈತಿ.

Exit mobile version