ಗದಗ ಜಿಲ್ಲೆಯಲ್ಲಿಂದು 61 ಕೊರೊನಾ ಪಾಸಿಟಿವ್ : ಯಾವ ಊರಲ್ಲಿ ಎಷ್ಟು?

corona gadag karnataka

ಗದಗ ಜಿಲ್ಲೆಯಲ್ಲಿ ಇಂದೂ ಕೂಡ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಗದಗ: ಜಿಲ್ಲೆಯಲ್ಲಿ ರವಿವಾರ ದಿ.26 ರಂದು ಒಟ್ಟು 61 ಕೊವಿಡ್-19 ಸೋಂಕು ಪ್ರಕರಣ ದೃಢಪಟ್ಟಿವೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊವಿಡ್-19 ಸೋಂಕು ವರದಿಯಾದ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ನಗರದ ಗಣೇಶ ದೇವಸ್ಥಾನದ ಹತ್ತಿರ ಮಸಾರಿ, ಶರಣಬಸವೇಶ್ವರ ನಗರ ಬೆಟಗೇರಿ, ಅಮರೇಶ್ವರ ನಗರ, ಕೆ.ಎಸ್.ಆರ್.ಟಿ.ಸಿ.ಕಾಲೋನಿ, ಕನ್ಯಾಳ ಅಗಸಿ, ಎಸ್.ಎಂ.ಕೆ.ನಗರ, ಹುಡ್ಕೋ ಕಾಲನಿ, ಮೇಲ್ಮಠ, ಒಕ್ಕಲಗೇರಿ ಓಣಿ, ಕಿಲ್ಲಾ ಓಣಿ, ಸಿಂಡಿಕೇಟ್ ಬ್ಯಾಂಕ ಹತ್ತಿರ ಬೆಟಗೇರಿ.

ಗದಗ ತಾಲೂಕಿನ ಬಿಂಕದಕಟ್ಟಿ, ಹೊಂಬಳ, ನೀಲಗುಂದ, ಮಲ್ಲಾಪೂರ, ಚಿಕ್ಕ ಹಂದಿಗೋಳ,

ಮುಂಡರಗಿ ಪಟ್ಟಣದ ಜಾಗೃತ ವೃತ್ತ, ಮಸೂತಿ ಓಣಿ,

ಮುಂಡರಗಿ ತಾಲೂಕಿನ ಹಳ್ಳಿಗುಡಿ,

ರೋಣ ಪಟ್ಟಣದ ತಳವಾರ ಓಣಿ,

ರೋಣ ತಾಲೂಕಿನ ಹಿರೇಹಾಳ, ನಿಡಗುಂದಿ, ಹೊಳೆಆಲೂರ, ಅಬ್ಬಿಗೇರಿ,

ಲಕ್ಷ್ಮೇಶ್ವರದ ಹಳ್ಳದಕೇರಿ, ಪೇಟೆಬನ, ಗೌಡರ ಓಣಿ,

ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ,

ನರಗುಂದ ಪಟ್ಟಣದ ಹುಣಸಿಕಟ್ಟಿ ಪ್ಲಾಟ, ನೀರಾವರಿ ಪ್ಲಾಟ, ಗಾಡಿ ಓಣಿ, ಅಂಬೇಡ್ಕರ ನಗರ,

ನರಗುಂದ ತಾಲೂಕಿನ ಹುಣಸಿಕಟ್ಟಿ, ಹೊಸೂರ, ಕೋಣ್ಣೂರ, ಶಿರೋಳ, ಸೋಮಾಪುರ,

ಧಾರವಾಡ ಜಿಲ್ಲೆಯ ಮುಂಜುನಾಥ ನಗರ ಹುಬ್ಬಳ್ಳಿ, ಸುಭಾಷ ನಗರ, ಗುಡಿಹಾಳ, ಹುಬ್ಬಳ್ಳಿಯ ವಿದ್ಯಾನಗರ, ಅಣ್ಣಿಗೇರಿ,

ಮೃತರ ವಿವರ

ಲಕ್ಷ್ಮೇಶ್ವರ ಪಟ್ಟಣದ ಸೋಮೆಶ್ವರ ನಗರ ನಿವಾಸಿ 78 ವರ್ಷದ ವೃದ್ಧೆ ಪಿ-65878 ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಜಿಮ್ಸ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 19 ರಂದು ಇವರಿಗೆ ಕೋವಿಡ್-19 ದೃಢಪಟ್ಟಿರುತ್ತದೆ. ದಿ. 25 ರಂದು ನಿಮೋನಿಯಾ ಹಾಗೂ ಹೃದಯಾಘಾತದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿರುತ್ತದೆ.

ಗದಗ ಬ್ಯಾಂಕರ್ಸ ಕಾಲೋನಿ ನಿವಾಸಿ 64 ವರ್ಷದ ಪುರುಷ ಪಿ-91077 ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಜಿಮ್ಸ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 24 ರಂದು ಇವರಿಗೆ ಕೋವಿಡ್-19 ದೃಢಪಟ್ಟಿರುತ್ತದೆ. ದಿ.25 ರಂದು ನಿಮೋನಿಯಾ, ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿರುತ್ತದೆ.

ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

Exit mobile version