ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಜುಲೈ 24ಕ್ಕೆ ಕೋರ್ಟಿಗೆ ಅದ್ವಾನಿ ಹೇಳಿಕೆ

ram mandir babri maschid advani

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಜುಲೈ 24ಕ್ಕೆ ಕೋರ್ಟಿಗೆ ಅದ್ವಾನಿ ಹೇಳಿಕೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ ಜುಲೈ 24ರಂದು ಲಾಲ್ ಕೃಷ್ಣ ಅದ್ವಾನಿ ಅವರ ಹೇಳಿಕೆ ಪಡೆಯಲಿದೆ.

ಲಕ್ನೋ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಕೆ. ಯಾದವ್ ಈ ಕುರಿತಾಗಿ ಹೇಳಿಕೆ ನೀಡಲು ಬಿಜೆಪಿ ಹಿರಿಯ ನಾಯಕರಾದ ಅದ್ವಾನಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ದಿನಾಂಕ ನಿಗದಿ ಮಾಡಿದ್ದಾರೆ.

ಜುಲೈ 23ರಂದು ಜೋಶಿ ಮತ್ತು 24ರಂದು ಅದ್ವಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲಿದ್ದಾರೆ. ಜುಲೈ 22ರಂದು ಶಿವಸೇನಾದ ಮಾಜಿ ಸಂಸದ ಸತೀಶ್ ಪ್ರಧಾನ್ ಹೇಳಿಕೆ ದಾಖಲು ಮಾಡಲಿದ್ದಾರೆ.

ಡಿಸೆಂಬರ್ 6, 1992ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ಪ್ರಕರಣದಲ್ಲಿ ಈ ಮೂವರು ವಿಚಾರಣೆ ಎದುರಿಸುತ್ತಿದ್ದು, ಕ್ರಿಮಿನಲ್ ಸಂಚಿನ ಆರೋಪ ಎದುರಿಸುತ್ತಿದ್ದಾರೆ.

Exit mobile version