ಮಸೀದಿ, ದರ್ಗಾಗಳು ಅನುಸರಿಸಬೇಕಾದ ಕ್ರಮಗಳೇನು?

ಬೆಂಗಳೂರು: ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಮಸೀದಿ ಹಾಗೂ ದರ್ಗಾಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಅಲ್ಪ ಸಂಖ್ಯಾತ ಆಯೋಗ ಕೆಲವು ಸೂಚನೆಗಳನ್ನು ನೀಡಿದೆ. ಈ ಕುರಿತು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಆದೇಶಿಸಿದ್ದಾರೆ.

ಮಸೀದಿ-ದರ್ಗಾದಲ್ಲಿ ಪಾಲಿಸಬೇಕಾದ ಸೂಚನೆಗಳು

1) ಪ್ರಾರ್ಥನೆ ಸಲ್ಲಿಸುವವರು ಮನೆಯಲ್ಲಿಯೇ ವಝೂ ಮಾಡಿ ಬರಬೇಕು

2) ಮಸೀದಿಯಲ್ಲಿನ ಶೌಚಾಲಯಗಳನ್ನು ಶುಚಿಯಾಗಿಡಬೇಕು

3) ಅನಿವಾರ್ಯತೆ ಇದ್ದಲ್ಲಿ ಮಾತ್ರ ಶೌಚಾಲಯ ಬಳಕೆ ಮಾಡಬೇಕು

4) ಮಸೀದಿ ಒಳ ಹಾಗೂ ಹೊರ ಪ್ರವೇಶಕ್ಕೆ ಒಂದೇ ಬಾಗಿಲು ಇರಬೇಕು

5) ಪ್ರಾರ್ಥನೆಗೂ ಮುನ್ನ ಮಸೀದಿಯಲ್ಲಿ ಔಷಧಿ ಸಿಂಪಡಿಸಬೇಕು

6) ಪ್ರಾರ್ಥನೆಗೆ ಬರುವವರು ದೇಹದ ತಾಪಮಾನ ಪರೀಕ್ಷಿಸಿಕೊಳ್ಳಬೇಕು

7) ಪ್ರಾರ್ಥನೆ ವೇಳೆ 1 ರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು

8) ನಮಾಜ್ ಗೆ ಬರುವವರು ಮನೆಯಿಂದಲೇ ಚಾಪೆ ತರಬೇಕು

8) 10 ರಿಂದ 15 ನಿಮಿಷದಲ್ಲಿ ನಿತ್ಯದ ನಮಾಜ್ ಮುಗಿಸಬೇಕು

9) ಹೆಚ್ಚು ಜನರಿದ್ದಲ್ಲಿ ನಮಾಜ್ ಮಾಡಲು ಎರಡು ಜಮಾತ್ ಮಾಡಬೇಕು

10) ಸುನ್ನತ್ ಹಾಗೂ ನಫೀಲ್ ನಮಾಜ್ ಮನೆಯಲ್ಲಿಯೇ ಮಾಡಬೇಕು

11) ನಮಾಜ್ ಮುಗಿದ ತಕ್ಷಣ ಯಾವುದೇ ಚರ್ಚೆ ಮಾಡದೇ ಮನೆಗೆ ತೆರಳಬೇಕು

12) ಶುಕ್ರವಾರದ ನಮಾಜ್ ನ ಖುತ್ಬಾ ಸಂಕ್ಷಿಪ್ತವಾಗಿ ಮುಗಿಸಬೇಕು

13) ಶುಕ್ರವಾರದ ನಮಾಜನ್ನು 20 ನಿಮಿಷದಲ್ಲಿ ಮುಗಿಸಬೇಕು

14) ದರ್ಗಾ ಹಾಗೂ ಮಸೀದಿ ಆವರಣದಲ್ಲಿ ಭಿಕ್ಷಟಣೆಯನ್ನು ನಿಷೇಧಿಸಲಾಗಿದೆ

15) ದರ್ಗಾಗಳಲ್ಲಿ ಸಿಹಿ ಹಂಚಿಕೆ ಮತ್ತು ಪಡೆಯುವುದನ್ನು ನಿಷೇಧಿಸಲಾಗಿದೆ

16) ಗೋರಿಗಳನ್ನು ಮುಟ್ಟುವುದು ಕೂಡ ನಿಷೇಧಿಸಲಾಗಿದೆ.

17) ಅಪ್ಪುಗೆ ಮತ್ತು ಕೈಕುಲುಕುವುದನ್ನು ಸಾದ್ಯವಾದಷ್ಟು ತಪ್ಪಿಸಬೇಕು

Exit mobile version