150ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ನೆರವು ನೀಡಿದ್ದೇವೆ: ಪ್ರಧಾನಿ ಮೋದಿ

ವಿಶ್ವದ ಜನಸಂಖ್ಯೆಯಲ್ಲಿ ಆರನೆ ಒಂದರಷ್ಟನ್ನು ಭಾರತ ಹೊಂದಿದೆ. ನಮ್ಮ ಜವಾಬ್ದಾರಿಯ ಅರಿವು ನಮಗಿದೆ ಎಂದು ಪದ್ರಧಾನಿ ಮೋದಿ ಹೇಳಿದರು.

ನವದೆಹಲಿ: ‘ಭೂಕಂಪವಿರಲಿ, ಚಂಡಮಾರುತವಿರಲಿ ಅಥವಾ ಎಬೋಲಾ ಬಿಕ್ಕಟ್ಟಿರಲಿ, ಭಾರತವು ವೇಗವಾಗಿ ಸ್ಪಂದಿಸಿದೆ. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ 150 ದೇಶಗಳಿಗೆ ನೆರವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಅವರು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ಸಭೆಯನ್ನು ಉದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಶುಕ್ರವಾರ ರಾತ್ರಿ 8.30ಕ್ಕೆ ಭಾಷಣ ಮಾಡಿದರು.
ವಿಶ್ವಸಂಸ್ಥೆಯು ಎರಡನೆ ಮಹಾಯುದ್ಧದ ನಂತರದ ಸಂಕಷ್ಟದಲ್ಲಿ ಹುಟ್ಟಿಕೊಂಡಿತು. ಈಗ ಕೋವಿಡ್ ಬಿಕ್ಕಟ್ಟಿದೆ. ಇದು ವಿಶ್ವಸಂಸ್ಥೆಯ ಮರುಹುಟ್ಟು ಮತ್ತು ಸುಧಾರಣೆಗೆ ಹಾದಿಯಾಗಬೇಕು. ಈ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು’ ಎಂದು ಅವರು ಹೇಳಿದರು.

‘ವಿಶ್ವದ ಜನಸಂಖ್ಯೆಯಲ್ಲಿ ಭಾರತವು 1/6 ಪ್ರಮಾಣ ಹೊಂದಿದೆ. ನಮ್ಮ ಜವಾಬ್ದಾರಿಯ ಅರಿವು ನಮಗಿದೆ. ಭಾರತ ತನ್ನ ಅಭಿವೃದ್ಧಿಯ ಗುರಿಗಳಲ್ಲಿ ಯಶಸ್ವಿಯಾದರೆ ಅದು ಜಾಗತಿಕ ಅಭಿವೃದ್ಧಿಗೂ ಕಾರಣವಾಗುತ್ತದೆ’ ಎಂದು ಪ್ರಧಾನಿ ತಿಳಿಸಿದರು.

ವಿಶ್ವಸಂಸ್ಥೆಯ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. ಹಾಗೆಯೇ ವಿಶ್ವಸಂಸ್ಥೆಯಾರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ಬೆಳವಣಿಗೆಯಲ್ಲೂ ಭಾರತದ ಪಾತ್ರವಿತ್ತು. ಈ ಕೌನ್ಸಿಲ್ ನ ಪ್ರಥಮ ಅಧ್ಯಕ್ಷರು ಭಾರತೀಯನೇ ಆಗಿದ್ದರು ಎಂದು ಪ್ರಧಾನಿ ಸ್ಮರಿಸಿದರು.

Exit mobile version