ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ ಕೊರೋನಾ ಸೋಂಕಿನ ವಿಚಾರವನ್ನೆ ಮತ್ತೆ ಪ್ರಾಸ್ತಾಪಿಸಿ ಹಲವು ಸಲಹೆ ನೀಡಿದ್ದಾರೆ. ಅವರ ಮನ್ ಕಿ ಬಾತ್ ಹೈಲೆಟ್ಸ್ ಇಲ್ಲದೆ ನೋಡಿ…

ಯೋಗ ಮಾಡುವುದರಿಂದ ದೇಹದ ಇಮ್ಯೂನಿಟಿ ಹೆಚ್ಚಾಗುತ್ತದೆ. ವಿವಿಧ ಪ್ರಾಣಾಯಾಮಗಳಿಂದ ಉಸಿರಾಟದ ಸಮಸ್ಯೆ ದೂರಾಗುತ್ತದೆ. ಹಾಗಾಗಿ ಯೋಗ ಮಾಡುವುದರಿಂದ ಕೊರೊನಾವನ್ನು ಹೊಡೆದೋಡಿಸಬಹುದು. ಅದಕ್ಕಾಗಿ ಎಲ್ಲರೂ ಯೋಗ ಮಾಡಿ ಎಂದು ಕರೆಕೊಟ್ಟಿದ್ದಾರೆ.
ನಾನು ಈ ಹಿಂದಿನ ಮನ್‌ಕಿಬಾತ್‌ನಲ್ಲಿ ಮಾತನಾಡಿದಾಗ, ಎಲ್ಲಾ ರೀತಿಯ ಪ್ರಯಾಣವನ್ನು ಬಂದ್ ಮಾಡಿರುವ ಕುರಿತು ವಿಷಯ ಪ್ರಾಸ್ತಾಪಿಸಿದ್ದೆ.
ಆದರೆ ಈಗ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಕೊರೊನ ವೈರಸ್ ವಿರುದ್ಧದ ಹೋರಾಟದಲ್ಲಿ ನಾವು ಅಸಡ್ಡೆ ಮಾಡಬಾರದು. ನಾವು ಈಗ ಹೆಚ್ಚು ಪ್ರಾಮಾಣಿಕವಾಗಿ ಸಾಮಾಜಿಕ ಅಂತರ ಮತ್ತು ಇತರ ನಿಯಮಾವಳಿಗಳನ್ನು ಅನುಸರಿಸಬೇಕಾಗಿದೆ ಎಂದು ಹೇಳಿದರು.
60 ದಿನಗಳ ಲಾಕ್ ಡೌನ್ ಸಮಯದಲ್ಲಿ ಭಾರತವು ಅಗ್ರ 10 ಕೊರೊನಾ ವೈರಸ್ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ತಲುಪಿದೆ. ಕಳೆದ 24 ಗಂಟೆಗಳಲ್ಲಿ 8,380 ಹೊಸ ರೋಗಿಗಳ ದಾಖಲೆಯ ಜಿಗಿತದೊಂದಿಗೆ ದೇಶದಲ್ಲಿ ಸುಮಾರು 1.82 ಲಕ್ಷ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವು ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೂ ಕಡಿಮೆ ಜನಸಂಖ್ಯೆ ಹೊಂದಿರುವ ಇತರ ದೇಶಗಳಿಗೆ ಹೋಲಿಸಿದರೆ ನಾವು ಕೊರೊನಾ ವೈರಸ್ ನಿಯಂತ್ರಣದಲ್ಲಿಡಲು ಸಾಧ್ಯವಾಯಿತು. ಸಾಮೂಹಿಕ ಪ್ರಯತ್ನಗಳಿಂದ ಭಾರತವು ಕೊರೊನಾ ವೈರಸ್ ವಿರುದ್ಧದ ಯುದ್ಧವನ್ನು ನಡೆಸುತ್ತಿದೆ. ಜಗತ್ತನ್ನು ನೋಡುವಾಗ, ಭಾರತೀಯರ ಸಾಧನೆ ಎಷ್ಟು ದೊಡ್ಡದಾಗಿದೆ ಎಂದು ನಮಗೆ ತಿಳಿದಿದೆ ಎಂದರು.
ಈ ಬಿಕ್ಕಟ್ಟಿನ ಅವಧಿಯಲ್ಲಿ ಜನರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದ ವಿವಿಧ ಸಂಘ ಸಂಸ್ಥೆಗಳ ಕ್ರಮಗಳನ್ನು ಶ್ಲಾಘಿಸಿದ ಅವರು, ಸೇವಾ ಪರಮೋ ಧರ್ಮ- ಸೇವೆಯು ಸ್ವತಃ ಸಂತೋಷ ನೀಡುತ್ತದೆ ಎಂದು ನಮ್ಮ ದೇಶದಲ್ಲಿ ಒಂದು ಮಾತಿದೆ. ಇತರರಿಗೆ ಸೇವೆ ಸಲ್ಲಿಸುವ ಜನರಿಗೆ ಸಾಕಷ್ಟು ವಿಶ್ವಾಸ, ಸಕಾರಾತ್ಮಕತೆ ಮತ್ತು ಚೈತನ್ಯವಿದೆ ಎಂದು ಪ್ರಧಾನಿ ಹೇಳಿದರು.

Exit mobile version