ಎಣ್ಣೆ ಹೊಡೆದ್ರೆ ಕೊರೋನಾ ಬರಲ್ವಂತೆ!: ವ್ಯಾಟ್ಸಾಪ್ ರಿಸರ್ಚ್: ಆಜ್ ತಕ್ ಚಾನೆಲ್ ಹೀಗೆ ಹೇಳಿತಾ?

Alcohal corona

ಎಣ್ಣೆ ಹೊಡೆದ್ರೆ ಕೊರೋನಾ ಬರಲ್ವಂತೆ!: ವ್ಯಾಟ್ಸಾಪ್ ರಿಸರ್ಚ್ ನ ಕುರಿತು ಆಜ್ ತಕ್ ಚಾನೆಲ್ ನ ಸ್ಕ್ರೀನ್ ಶಾಟ್

ಆಲ್ಕೊಹಾಲ್ ಸೇವನೆಯಿಂದ ಕೋರೊನಾ ಸೋಂಕು ತಗುಲಲಾರದು ಎಂಬ ಸುದ್ದಿ ಜಾಲತಾಣದಲ್ಲಿ ಮೊದಲಿನಿಂದಲೂ ಹರಿದಾಡುತ್ತಿದೆ. ಈಗ ಅದಕ್ಕೆ ಆಜ್ ತಕ್ ಚಾನೆಲ್ ಸ್ಕ್ರೀನ್ ಶಾಟ್ ಅನ್ನು ಆಧಾರವಾಗಿ ನೀಡುತ್ತಿದ್ದಾರೆ ಕೆಲವರು. ವಾಸ್ತವ ಏನು? ಈ ಫ್ಯಾಕ್ಟ್-ಚೆಕ್ ಓದಿ.

ಗದಗ: ‘ಎಣ್ಣಿ ಹೊಡದ್ರ ಕೋರೊನಾ ಬರಂಗಿಲ್ಲಲೇ. ನೋಡಿ ಇಲ್ಲ, ಸ್ಯಾನಿಟೈಸರ್ ಕೈಗೆ ಯಾಕ್ ಹಚ್ತಾರಾ ಹೇಳು? ಅದರಾಗ ಆಲ್ಕೊಹಾಲ್ ಇರತ್ತ ಮಗನ. ನೋಡಿಲ್ಲಿ ಆಜ್ ತಕ್ ಚಾನೆಲ್ನವ್ರ ತೋರಿಸ್ಯಾರ ಎಂದು ಒಂದು ಆಜ್ ತಕ್ ಪರದೆಯ ಸ್ಕ್ರೀನ್ ಶಾಟ್ ಇರುವ ವ್ಯಾಟ್ಸಾಪ್ ತೋರಿಸುತ್ತಾನೆ. ನಂಲೇಬೇಕು ಅನ್ನುವಂತಿರುತ್ತದೆ ಅವನ ವಾದ.

ಹಾಗಾದರೆ ವಾಸ್ತವ ಬೇರೆಯೇ ಇದೆ. ಮೊದಲಿಗೆ ಆಜ್ ತಕ್ ಅಂತಹ ಕಾರ್ಯಕ್ರಮ ಮಾಡಿತೆ ಎನ್ನುವುದನ್ನು ನೋಡೋಣ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಜ್ ತಕ್ ಸ್ಕ್ರೀನ್ ಶಾಟ್ ಫೇಕ್ ಅಲ್ಲ. ಅದು ನಿಜವೇ. ಆದರೆ ಯಾವ ಸಂದೃ್ಭದಲ್ಲಿ ಅದನ್ನು ಬಳಸಿದರು ಎಂಬುದು ಇಲ್ಲಿ ಮುಖ್ಯ. ಻ಂದರೆ ತಮಗೆ ಪ್ರಿಯವಾಗುವ ಸ್ಕ್ರೀನ್ ಶಾಟ್ ಮಾತ್ರ ತೋರಿಸಿರುವ ಕಿಡಿಗೇಡಿಗಳು ಆಜ್ ತಕ್ ಕೋರೊನಾ ಶಮನಕ್ಕೆ ಸಾರಾಯಿ ಮದ್ದು ಎಂದು ಪ್ರೂವ್ ಮಾಡಿದೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದರು. ಆಗೀಗ ಕುಡಿಯುವ ಸಾವಿರಾರು ಜನ ಅದನ್ನು ನಂಬಿ ವಾರದಲ್ಲಿ ಒಂದೆರಡು ದಿನ ಜಾಸ್ತಿ ಮಾಡಿರುವ ಸಾಧ್ಯತೆಗಳಿವೆ.

ಆಲ್ಕೋಹಾಲ್ ಕೋರೊನಾ ಬರದಂತೆ ತಡೆಯುವುದೂ ಇಲ್ಲ ಮತ್ತು ಕೋವಿಡ್-19 ಗುಣಮುಖ ಮಾಡುವುದೂ ಇಲ್ಲ ಎಂದು ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳಿಗೆ ಯಾವುದೇ ಆಧಾರವಿಲ್ಲ ಎಂದು ತೋರಿಸುವ ಕಾರ್ಯಕ್ರಮವನ್ನು ಆಜ್ ತಕ್ ಪ್ರಸಾರ ಮಾಡಿತ್ತು.

ಆಲ್ಕೋಹಾಲ್ ಸೇವನೆಯಿಂದ ಕೋರೊನಾ ತಡೆಯಬಹುದು ಅಥವಾ ಕೋವಿಡ್ನಿಂದ ಗುಣಮುಖರಾಗಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಮತ್ತು ವೈದ್ಯಕೀಯ ಆಧಾರಗಳಿಲ್ಲ. ಆಲ್ಕೋಹಾಲ್ ಪರಿಹಾರ ಎಂಬ  ಈ ಸುಳ್ಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಈ ಬಗ್ಗೆ ಜಾಗ್ರತಿ ಮೂಡಿಸಬೇಕು.

      -ಡಾ, ಸುರಂಜೀತ್ ಚಟರ್ಜಿ, ಅಪೊಲೋ ಆಸ್ಪತ್ರೆ

ಕಾರ್ಯಕ್ರಮದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಬಂದಿರುವ ವಾದವನ್ನು ಒಂದೆರಡು ಸಲ ಸ್ಕ್ರೀನ್ ಮೇಲೆ ತೋರಿಸಿತ್ತು. ಅದರ ಸ್ಕ್ರೀನ್ ಶಾಟ್ ಇಟ್ಟುಕೊಂಡು ಅದನ್ನೇ ಸಾಕ್ಷ್ಯ, ಆಧಾರ ಎಂಬಂತೆ ಮತ್ತೆ ಫೇಕ್ ಮಾಹಿತಿ ರೆಕ್ಕೆಪುಕ್ಕ ಕಟ್ಟಿಕೊಂಡು ‘ತೂರಾಡುತ್ತ, ಓಲಾಡುತ್ತ’’ ಹಳ್ಳಿ ಹಳ್ಳಿಯ ವ್ಯಾಟ್ಸಾಪ್ ತಲುಪುತ್ತಿದೆ.

ಆಜ್ ತಕ್ ಕಾರ್ಯಕ್ರಮವನ್ನು ಪೂರ್ಣ ಗಮನಿಸಿದಾಗ. ಅದು ಆಲ್ಕೊಹಾಲ್ನಿಂದ ಕೋರೊನಾ ಬರಲ್ಲ ಎಂಬುದಕ್ಕೆ ಯಾವ ಆಧಾರವೂ ಇಲ್ಲ ಮತ್ತು ಹೆಚ್ಚಿನ ಪ್ರಮಾಣದ ಆಲ್ಕೊಹಾಲ್ನಿಂದ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಪ್ರತಿಪಾದಿಸಿತ್ತು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂ.ಎಚ್.ಒ) ಕೂಡ ಈ ಬಗ್ಗೆ  ಮೇಲಿನ ರೀತಿಯ ಪ್ರಕಟಣೆ ನೀಡುತ್ತಲೇ ಬಂದಿದೆ. ಆದರೆ ಸುಳ್ಳು ಮಾತ್ರ ಎಣ್ಣಿ ಹೊಡೆದೋರಂಗ ಅಮಲಿನಲ್ಲಿ ವ್ಯಾಟ್ಸಾಪ್ ಮೂಲಕ ಕಂಡ ಕಂಡ ಮೊಬೈಲ್ ಹೊಕ್ಕುತ್ತಿದೆ.

Exit mobile version