ಆರ್ಥಿಕತೆ ಸಹಜ ಸ್ಥಿತಿಗೆ ಬರುವ ಲಕ್ಷಣ ಕಾಣಿಸುತ್ತಿವೆ: RBI ಗವರ್ನರ್ ಶಶಿಕಾಂತ್ ದಾಸ್

ಆರ್.ಬಿ.ಐ ಬೆಳವಣಿಗೆ ಮತ್ತು ಹಣಕಾಸು ಸ್ಥಿರತೆಗೆ ಆದ್ಯತೆ ನೀಡಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸು ವ್ಯವಸ್ಥೆ ರಕ್ಷಿಸಲು ಮತ್ತು ಆರ್ಥಿಕತೆಯನ್ನು ಬೆಂಬಲಿಸಲು ಆರ್.ಬಿ.ಐ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಆರ್.ಬಿ.ಐ. ಗವರ್ನರ್ ಶಶಿಕಾಂತ್ ದಾಸ್ ತಿಳಿಸಿದರು.

ನವದೆಹಲಿ: ‘ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲುಗೊಳಿಸಿದ ನಂತರ ದೇಶದ ಆರ್ಥಿಕತೆಯು ಮರಳಿ ಸಹಜ ಸ್ಥತಿಗೆ ಬರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಆರ್.ಬಿ.ಐ ಗವರ್ನರ್ ಶಶಿಕಾಂತ್ ದಾಸ್ ಹೇಳಿದರು.

ಅವರು ಇಂದು ಶನಿವಾರ 7ನೆ ಎಸ್.ಬಿ.ಐ. ಬ್ಯಾಂಕಿಂಗ್ ಮತ್ತು ಆರ್ಥಿಕತೆ ಸಮಾವೇಶದಲ್ಲಿ ಮುಖ್ಯ ಭಾಷಣವನ್ನು ಪ್ರಸ್ತುತಪಡಿಸಿದರು.

ಬೆಳವಣಿಗೆಯೇ ಆರ್.ಬಿ.ಐ.ನ ಪ್ರಮುಖ ಗುರಿ. ಜೊತೆಗೆ ಹಣಕಾಸು ಸ್ಥಿರತೆಯು ಮುಖ್ಯವಾದದ್ದೇ. ದೇಶವು ಸಾಂರಚನಿಕ ಸುಧಾರಣೆಗಳ ಮೂಲಕ ಸಹಜ ಆರ್ಥಿಕ ಸ್ಥಿತಿ ತಲುಪಲು ಯತ್ನಿಸುತ್ತಿದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಮತ್ತು ಸಾಲದ ಹರಿವು ಉತ್ತಮಗೊಳ್ಳುತ್ತಿದೆ. ಇದು ಒಳ್ಳೆಯ ಲಕ್ಷಣ ಎಂದು ದಾಸ್ ತಿಳಿಸಿದರು.

Exit mobile version