ಬುದ್ದಿ ವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕು:ರಘುರಾಮ ರಾಜನ್

ನವದೆಹಲಿ : ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆರ್ಥಿಕ ತಜ್ಞ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ. ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಲಾಕ್ ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರವುಗೊಳಿಸಬೇಕು.

ಈವಗಾಗಲೆ ದೇಶದ ಆರ್ಥಿಕ ಸ್ಥಿತಿ, ಮತ್ತಿತರ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. ಈ ವಿಡಿಯೋ ಸರಣಿಯಲ್ಲಿ ಮೊದಲ ಅತಿಥಿಯಾಗಿ ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮಾತನಾಡಿದ್ದಾರೆ. ಬಡವರ ಹೊಟ್ಟೆ ತುಂಬಿಸಲು ದೇಶಕ್ಕೆ ರೂ.65 ಸಾವಿರ ಕೋಟಿ ಅಗತ್ಯವಿದೆ. ಜಿಡಿಪಿ ರೂ. 200 ಲಕ್ಷ ಕೋಟಿಯಾಗಿರುವುದರಿಂದ ಭಾರತ ಅದನ್ನು ಭರಿಸಬಲ್ಲದು. ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ಅತ್ಯಂತ ಮುಖ್ಯವಾಗಿದೆ. ಸವಾಲುಗಳು ದೊಡ್ಡದಾದಾಗ ಮನೆಗಳನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಡವರಿಗೆ ಡಿಬಿಟಿ, ಮನ್ರೇಗಾ, ವಯೋವೃದ್ಧರಿಗೆ ಪಿಂಚಣಿ ಹಾಗೂ ಪಿಡಿಎಸ್ ಮೂಲಕ ಹಣ ನೀಡಿ ಬೆಂಬಲಿಸಬೇಕಿದೆ. ಪ್ರಸ್ತತ ಬಡವರ ಹಸಿವು ನೀಗಿಸುವಲ್ಲಿ ದೇಶದ ಸಾಮರ್ಥ್ಯ ಕಡಿಮೆಯಿದ್ದು, ಇಂತಹ ಸಂದರ್ಭದಲ್ಲಿ ಭಾರತ ಅತ್ಯಂದ ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Exit mobile version