ಮುಖಕ್ಕೆ ಮಾಸ್ಕ ಧರಿಸದಿದ್ದರೆ 250 ರೂ ದಂಡ

ಗದಗ: ಕೋವಿಡ್-19 ಒಂದು ಮಾರಕ ಸಾಂಕ್ರಾಮಿಕ ರೋಗವಾಗಿದ್ದು ಮನುಷ್ಯರಿಂದ ಮನುಷ್ಯರಿಗೆ ತಿವ್ರಗತಿಯಲ್ಲಿ ಹರಡುತ್ತದೆ. ಗದಗ-ಬೆಟಗೇರಿ ಅವಳಿ ನಗರದ ಮಾರುಕಟ್ಟೆ ಪ್ರದೇಶ, ಅಂಗಡಿ ಮಳಿಗೆ, ಮೆಡಿಕಲ್ ಶಾಪ್, ಮಟನ್ ಶಾಪ್ ಹಾಗೂ ಇನ್ನಿತರೆ ಯಾವುದೇ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರಗೆ ಬರುವ ಸಾರ್ವಜನಿಕರು, ಅಂಗಡಿ, ಮಳಿಗೆ ಮಾಲಿಕರು ಹಾಗೂ ಕೆಲಸಗಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮುಖಕ್ಕೆ ಮಾಸ್ಕ ಧರಿಸುವುದು ಕಡ್ಡಾಯವಾಗಿರುತ್ತದೆ,  ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ  ಮಾಸ್ಕ ಧರಿಸದೆ ಇರುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಂಡುಬಂದಲ್ಲಿ ರೂ.250ರೂ. ದಂಡ ವಿಧಿಸಲಾಗುವುದು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗ ತಡೆ ನಿಯಮ-2020 ಮತ್ತು ವಿಷತ್ತು ನಿರ್ವಹಣಾ ಕಾಯ್ದೆ2005 ರಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ  ತಿಳಿಸಿದ್ದಾರೆ.

Exit mobile version