ಹಿಂದುಳಿದವರ್ಗದ ಕಾನೂನು ಪದವೀಧರರಿಗೆ ಶಿಷ್ಯವೇತನಕ್ಕೆ ಒತ್ತಾಯ

ಗದಗ: ನೂತನವಾಗಿ ವಕೀಲಿ ವೃತ್ತಿ ಆರಂಭಿಸಿದ ಹಿಂದುಳಿದ ವರ್ಗದ ಕಾನೂನು ಪದವೀಧರರ ಮಾಸಿಕ ಶಿಷ್ಯವೇತನ ತಡೆ ಹಿಡಿದಿರುವ ಹಿಂದುಳಿದ ವರ್ಗಗಳ ಇಲಾಖೆಯ ಕ್ರಮ ಖಂಡನೀಯ ಎಂದು ಕಾನೂನು ಶಿಷ್ಯವೇತನ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೂತನ ಕಾನೂನು ಪದವೀಧರರಿಗೆ ತಿಂಗಳಿಗೆ 4 ಸಾವಿರ ರೂಪಾಯಿಯಂತೆ ನಾಲ್ಕು ವರ್ಷದವರೆಗೆ ಪ್ರೋತ್ಸಾಹ ಪೂರ್ವಕವಾಗಿ ನೀಡುತ್ತ ಬಂದಿದ್ದ ಶಿಷ್ಯವೇತನವನ್ನು ಕೊವಿಡ್ ನೆಪ ಮಾಡಿ ಏಪ್ರಿಲ್ ತಿಂಗಳಿಂದ ತಡೆ ಹಿಡಿಯಲಾಗಿದೆ. ಇದೀಗ ತಾನೇ ವೃತ್ತಿ ಆರಂಭಿಸಿದ ವಕೀಲರಿಗೆ ಇದರಿಂದ ತೊಂದರೆಯಾಗಿದೆ ಎಂದು ಯುವ ವಕೀಲರು ದೂರಿದ್ದಾರೆ.

ಇದರ ಬಗ್ಗೆ ಕಾನೂನು ಸಚಿವರು ಗಮನಹರಿಸಿ ಶಿಷ್ಯವೇತನ ಬಿಡುಗಡೆ ಮಾಡಿಸಬೇಕು ಎಂದು ಅವರು ವಿನಂತಿಸಿದ್ದಾರೆ.

Exit mobile version