ಪ್ರಿಯಾಂಕಾ ಗಾಂಧಿಗೆ ನೀಡಿದ ವಿಶೇಷ ಭದ್ರತೆ, ನಿವಾಸ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ ವಿಶೇಷ ಭದ್ರತೆ ಹಾಗೂ ನಿವಾಸ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಈ ಕುರಿತು ಆದೇಶ ನೀಡಿದ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆಯನ್ನು ಮುಂದುವರೆಸಿದೆ. ಒಂದು ತಿಂಗಳೊಳಗಾಗಿ ಮನೆ ಖಾಲಿ ಮಾಡಬೇಕು. ಇಲ್ಲವಾದಲ್ಲಿ 01-08-2020 ರ ನಂತರ ಮನೆಯಲ್ಲಿ ವಾಸವಿದ್ದರೆ ಕಾನೂನು ನಿಯಮದಂತೆ ಅದಕ್ಕೆ ಸಂಬಂಧಪಟ್ಟ ದಂಡದ ಜೊತೆಗೆ ಬಾಡಿಗೆಯನ್ನು ಪಡೆಯಲಾಗುವುದು ಎಂದು ಗೃಹ ಇಲಾಖೆ ಆದೇಶಿಸಿದೆ.

Exit mobile version