ಮೊದಲನೇ ಹಂತದ ಚುನಾವಣೆ ಮಪತ್ರಗಳ ಸಲ್ಲಿಕೆ ಅವಧಿ ಮುಕ್ತಾಯ: ಗದಗ ಜಿಲ್ಲೆಯಲ್ಲಿ ಸಲ್ಲಿಕೆಯಾದ ಮತಪತ್ರಗಳ ವಿವರ

ಗದಗ ಜಿಲ್ಲೆಯಲ್ಲಿ ಸಲ್ಲಿಕೆಯಾದ ಮತಪತ್ರಗಳ ವಿವರ

ಗದಗ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಡಿ.11 ರಂದು ಮುಕ್ತಾಯವಾಗಿದ್ದು, ಒಟ್ಟು 801 ಸ್ಥಾನಗಳಿಗೆ 1212 ಮಹಿಳೆಯರು ಸೇರಿದಂತೆ ಒಟ್ಟಾರೆ 2802 ನಾಮಪತ್ರಗಳ ಸಲ್ಲಿಕೆಯಾಗಿವೆ.

ಮೊದಲ ಹಂತದಲ್ಲಿ ಗದಗ ತಾಲೂಕಿನ 26 ಗ್ರಾಮ ಪಂಚಾಯತಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 251, ಅನುಸೂಚಿತ ಪಂಗಡದ 85, ಹಿಂದುಳಿದ ಅ ವರ್ಗ 263, ಹಿಂದುಳಿದ ಬ ವರ್ಗ 52, ಸಾಮಾನ್ಯ 789,  ಒಟ್ಟು 1440 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇದನ್ನೂ ಓದಿ: ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೆ ಪ್ರತಿನಿಧಿ ಬೇಕಾಗಿದ್ದಾರೆ

ಲಕ್ಷ್ಮೇಶ್ವರ: ತಾಲೂಕಿನ 13 ಗ್ರಾಮ ಪಂಚಾಯತಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 184, ಅನುಸೂಚಿತ ಪಂಗಡದ 55, ಹಿಂದುಳಿದ ಅ ವರ್ಗ 67, ಹಿಂದುಳಿದ ಬ ವರ್ಗ 12, ಸಾಮಾನ್ಯ 337, ಒಟ್ಟು 655 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶಿರಹಟ್ಟಿ: ತಾಲೂಕಿನ 14 ಗ್ರಾಮ ಪಂಚಾಯತಗಳ 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 157, ಅನುಸೂಚಿತ ಪಂಗಡದ 66, ಹಿಂದುಳಿದ ಅ ವರ್ಗ 93, ಹಿಂದುಳಿದ ಬ ವರ್ಗ 24, ಸಾಮಾನ್ಯ 367 ಒಟ್ಟು 707 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.

ಇದನ್ನೂ ಓದಿ: ಉತ್ತರಪ್ರಭಕ್ಕೆ ಗ್ರಾಮ ಪಂಚಾಯತಿಗೆ ಪ್ರತಿನಿಧಿ ಬೇಕಾಗಿದ್ದಾರೆ

Exit mobile version