ಸಾರ್ವಜನಿಕರಿಂದ ಗೃಹ ಮಂಡಳಿ ಅಧಿಕಾರಿ ತರಾಟೆಗೆ

ಗದಗ: ಕರ್ನಾಟಕ ಗೃಹ ಮಂಡಳಿ ಅಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಇಂದು ಗದಗನ ಗೃಹ ಮಂಡಳಿ ಕಚೇರಿಯಲ್ಲಿ ನಡೆದಿದೆ.

ಕರ್ನಾಟಕ ಗೃಹ ಮಂಡಳಿಯಿಂದ ಪ್ಲಾಟ್ ಹರಾಜು ಪ್ರಕ್ರಿಯೆ ನಡೆದಿದ್ದು, 40 ಪ್ಲಾಟ್ ಹರಾಜು ಪ್ರಕ್ರಿಯೆಗೆ ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಗೃಹ ಮಂಡಳಿಯಿಂದ ಪ್ರತಿ ಚದುರ ಅಡಿಗೆ 550 ರೂ ನಿಂದ ಹರಾಜು ಆರಂಭವಾಗಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಹರಾಜು ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಒಂದು ಪ್ಲಾಟ್ ಗೆ 50 ಸಾವಿರ ಕಟ್ಟಿದ್ರೆ ಮಾತ್ರ ಹರಾಜು ಪ್ರಕ್ರಿಯೇಯಲ್ಲಿ ಅವಕಾಶ ನೀಡಲಾಗಿತ್ತು. ಹೀಗಾಗಿ ಗೃಹ ಮಂಡಳಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಎಸ್.ಎನ್ ಜೋಷಿ ಅವರಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಇನ್ನು ಹರಾಜು ಪ್ರಕ್ರಿಯೆಯಿಂದ ಗೃಹ ಮಂಡಳಿಯಲ್ಲಿ ಎಲ್ಲಿ ನೋಡಿದರು ಜನವೋ ಜನ ಎನ್ನುವಂತಿತ್ತು. 40 ಪ್ಲಾಟ್ ಗೆ ನೂರಾರು ಜನ ಜಮಾವಣೆಗೊಂಡಿದ್ದರು. ಇದರಿಂದ ಸಾಮಾಜಿಕ ಅಂತರ, ಮಾಸ್ಕ್, ಸೈನಿಟೆಜರ್ ವ್ಯವಸ್ಥೆ ಎಲ್ಲವೂ ಮಾಯವಾಗಿತ್ತು.

Exit mobile version