ನೀವು ಸರ್ಕಾರಿ ಜಮೀನು ಲೀಜ್ ಪಡೆದಿದ್ದಿರಾ? ಆ ಜಮೀನು ನಿಮ್ಮದಾಗಲಿದೆ..!

ಬೆಂಗಳೂರು: ಗುತ್ತಿಗೆಯಡಿಯಲ್ಲಿ ನೀಡಿದ್ದ ಸರ್ಕಾರಿ ಜಮೀನನ್ನು ಖಾಯಂ ಆಗಿ ಅವರ ಹೆಸರಿಗೆ ಮಾರ್ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶಿಕ್ಷಣ ಸಂಸ್ಥೆ, ವೈದ್ಯಕೀಯ, ಕೈಗಾರಿಕೆ ಹಾಗೂ ವ್ಯವಸಾಯ ಮೊದಲಾದ ಚಟುವಟಿಕೆಗಳು ನಡೆಸಲು ಖಾಸಗಿಯವರಿಗೆ ನೀಡಿರುವ ಸರ್ಕಾರಿ ಜಮೀನನ್ನು ಶಾಶ್ವತವಾಗಿ ಅವರಿಗೆ ಮಾರಾಟ ಮಾಡುವ ನಿರ್ಧಾರ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಖಾಸಗಿ ಕಂಪನಿಗಳಿಗೆ, ವ್ಯಕ್ತಿಗಳಿಗೆ ಗುತ್ತಿಗೆಯಡಿಯಲ್ಲಿ ನೀಡಿದ್ದ ಸರ್ಕಾರಿ ಜಮೀನನ್ನು ಖಾಯಂ ಆಗಿ ಅವರ ಹೆಸರಿಗೆ ಮಾರ್ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಂಜೂರು ಮಾಡಲಾದ ಉದ್ದೇಶಗಳಿಗೆ ಜಮೀನನ್ನು ಬಳಸದವರಿಂದ ಜಮೀನನ್ನು ಹಿಂಪಡೆಯುವುದಾಗಿ ನಿಯಮ ರೂಪಿಸಲಾಗಿದೆ. ಜಮೀನು ಪಡೆದುಕೊಂಡ ಉದ್ದೇಶಕ್ಕೆ ಬಳಸುವವರಿಗೆ ಜಮೀನಿನ ಮೌಲ್ಯ ಪಡೆದು ಅವರ ಹೆಸರಿಗೆ ವರ್ಗಾಯಿಸಲು ಅವಕಾಶ ನೀಡಲಾಗಿದೆ.
ಇದರಿಂದ ಪದೇ ಪದೇ ನವೀಕರಣಗೊಳಿಸುವ ಕೆಲಸ ಕಡಿಮೆಯಾಗುತ್ತದೆ. ಹಾಗಾಗಿ ಅವರಿಗೆ ಶಾಶ್ವತವಾಗಿ ನೀಡುವ ಯೋಜನೆ ರೂಪಿಸಲಾಗಿದೆ. ಉದ್ದೇಶಿತ ಕಾರ್ಯಗಳಿಗೆ ಬಳಸದೆ ಇದ್ದರೆ ಮರು ಪಡೆಯುವ ಲೀಸ್‌ ಅಗ್ರಿಮೆಂಟ್‌ ಅನ್ನು ಹಾಗೆಯೇ ಉಳಿಸಲಾಗುತ್ತದೆ.

Exit mobile version