ದೇಶ ಸೇವೆಗೆ ಅವಕಾಶ ನೀಡುವಂತೆ ಹೊಮ್ ಗಾರ್ಡ ನಿಂದ ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ

ರಾಯಚೂರು: ನನ್ನ ದೇಶದ ಸೈನಿಕರು ಸತ್ತಾಗಿನಿಂದ ನನಗೆ ನಿದ್ದೆ ಬರುತ್ತಿಲ್ಲ ಚೀನಾ ದೇಶದ ವಿರುದ್ಧ ಸೇಡು ತೀರಿಸಿಕೊಳ್ಳಲು ಗಡಿಯಲ್ಲಿ ಸೇವೆ ಸಲ್ಲಿಸಲು ನನಗೊಂದು ಅವಕಾಶ ಕಲ್ಪಿಸಿಕೊಡಿ ಎಂದು ಇಲ್ಲೊಬ್ಬ ಹೊಮ್ ಗಾರ್ಡ ರಕ್ತದಲ್ಲಿ ಪತ್ರ ಬರೆದು ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಕರ್ನಾಟಕ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಮಡಿವಾಳ ಅವರು ಬಿ.ಎ ಬಿ.ಇಡಿ ಶಿಕ್ಷಣ ಮುಗಿಸಿ ಹೋಮ್ ಗಾಡ್ ಆಗಿ ಹಾಗೂ ಭಗತ್ ಸಿಂಗ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದೇಶ ಸೇವೆ ಸಲ್ಲಿಸಲು ರಾಷ್ಟ್ರಪತಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಈಚೆಗೆ ಭಾರತ ಮತ್ತು ಚೀನಾದ ನಡುವಿನ ಗುಲ್ವಾನ್ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತ ದೇಶದ ಗಡಿಯನ್ನು ದಾಟಿ ದೇಶದ ಸೈನಿಕರನ್ನು ಕ್ರೂರವಾಗಿ ಕೊಂದಿದ್ದಾರೆ. ಈ ದೇಶದ ಸೈನಿಕರು ಸತ್ತಾಗಿನಿಂದ ನನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ರಕ್ತ ಕುದಿಯುತ್ತಿದೆ. ದೇಶ‌ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ರಕ್ತದಲ್ಲಿ ಮನವಿ ಪತ್ರ ಬರೆದಿದ್ದಾರೆ.

Exit mobile version