ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ನಿಮ್ಮ ಓಣಿಯಲ್ಲೂ ಕಸ ಹಾಕಿರಬಹುದು ನೋಡಿ…!

ಮುಂಡರಗಿ: ಯಾವುದಕ್ಕೂ ಒಂಚೂರು ನೀವು ನಿಮ್ಮ ಮನೆಯಿಂದ ಹೊರಗೆ ಬಂದು ನೋಡಿ ಬೀಡಿ. ಯಾಕಂದ್ರೆ ನಿಮ್ಮ ಮನೆಯ ಅಂಗಳದಲ್ಲೋ, ಓಣಿಯಲ್ಲೋ ಕಸ ಬಿದ್ದರೂ ಬಿದ್ದಿರಬಹುದು. ತಾನೆಗೆ ಬಿದ್ದ ಕಸ ಇದ್ರೆ ಏನು ಸಮಸ್ಯೆ ಇಲ್ಲ. ಪುರಸಭೆಯ ಮುಖ್ಯಾಧಿಕಾರಿಗಳೇ ಕಸ ಹಾಕಿಸ್ತಿದ್ದಾರೆ. ಹೀಗಾಗಿ ಯಾವುದಕ್ಕೂ ಒಂದು ಸಾರಿ ಬಂದ್ ನೋಡಿ ಬಿಡಿ. ಹೀಗಂತ ಮುಂಡರಗಿ ಜನರೀಗ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪುರಸಭೆ ಮುಖ್ಯಾಧಿಕಾರಿ ವರ್ತನೆ.
ಪಟ್ಟಣದ 22 ನೇ ವಾರ್ಡಿನ ಉಸ್ತಾದ್ ಪ್ಲಾಟ್ ನಲ್ಲಿ ಕಸ ವಿಲೇವಾರಿ ಮಾಡಿಸಲಾಗಿದೆ. ಮುಖ್ಯಾಧಿಕಾರಿಗಳ ಈ ವರ್ತನೆಗೆ ಜನರೇನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸುವಂಗಾಗಿದೆ.

ಆಗಿದ್ದೇನು..?
ಇಂದು ಇಲ್ಲಿನ 22 ನೇ ವಾರ್ಡಿನ ಉಸ್ತಾದ್ ಪ್ಲಾಟ್ ನಲ್ಲಿ ಪುರಸಭೆ ವಾಹನಗಳು ಕಸ ವಿಲೇವಾರಿ ಮಾಡಿವೆ. ಇಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಕಸ ಹಾಕಿದ ಜಾಗ ಪುರಸಭೆಗೆ ಸಂಬಂಧಿಸಿದ್ದೆ ಅಲ್ಲ. ಜೊತೆಗೆ ಆದರೂ ಇಲ್ಲಿ ಕಸ ಹಾಕುವುದು ಯಾವ ನ್ಯಾಯ..? ಪಟ್ಟಣ ಜನರ ಆರೋಗ್ಯ ರಕ್ಷಣೆ ಮಾಡಬೇಕಿದ್ದ ಪುರಸಭೆಯೇ ಈ ರೀತಿ ಓಣಿಯಲ್ಲಿ ಕಸ ಹಾಕುವುದು ಎಷ್ಟು ಸೂಕ್ತ..? ಈಗಾಗಲೇ ಸಾಂಕ್ರಾಮಿಕ ಕಾಯಿಲೆಗಳ ಭೀತಿಯಲ್ಲಿರುವ ಜನರಿಗೆ ಇಲ್ಲಿಯೇ ಕಸ ವಿಲೇವಾರಿ ಮಾಡಿರುವುದರಿಂದ ಮತ್ತಷ್ಟು ಆತಂಕ ಉಂಟು ಮಾಡಿದೆ.

ಈ ಬಗ್ಗೆ ಉತ್ತರಪ್ರಭದೊಂದಿಗೆ ಮಾತನಾಡಿದ ಸ್ಥಳೀಯ ಮುಖಂಡ ಎನ್.ಡಿ.ಕೆಲೂರ್, 22 ನೇ ವಾರ್ಡಿನಲ್ಲಿ ಕಸ ವಿಲೇವಾರಿ ಮಾಡಿದ್ದು ಎಷ್ಟು ಸರಿ..? ಈ ಜಾಗ ಪುರಸಭೆ ಅಥವಾ ಗಾಂವ್ ಠಾಣಾಗೆ ಸಂಬಂಧಿಸಿದ್ದು ಅಲ್ಲ. ಹೀಗಿದ್ದಾಗ್ಯೂ ಇಲ್ಲಿ ಕಸ ಹಾಕಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಸ್ಥಳೀಯರ ಪ್ರಕಾರ ಈ ಜಾಗೆ ಕೈಗಾರಿಕೆ ವ್ಯಾಪ್ತಿಗೊಳಪಟ್ಟಿದ್ದು, ಇಲ್ಲಿ ವ್ಯಕ್ತಿಯೊಬ್ಬ ಗ್ಯಾರೇಜ್ ನಿರ್ಮಾಣ ಮಾಡಿಕೊಳ್ಳುತ್ತಿದ್ದಾನೆ. ಹಾಗೂ ಇಲ್ಲಿ ಸಾಕಷ್ಟು ಮನೆಗಳಿವೆ ಹೀಗಿದ್ದಾಗ್ಯೂ ಇಲ್ಲಿಯೇ ಕಸ ವಿಲೇವಾರಿ ಮಾಡಿಸಿದ್ದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ‌.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಎಸ್.ಎಚ್.ನಾಯಕ್, 22 ನೇ ವಾರ್ಡಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ರಜೆ ಅವಧಿಯಲ್ಲಿ ಅಥವಾ ರಾತ್ರೋ ರಾತ್ರಿ ಕಟ್ಟಡ ನಿರ್ಮಿಸುತ್ತಿರುವುದರಿಂದ ಆ ಕಟ್ಟಡ ಬಳಿ ಕಸ ವಿಲೇವಾರಿ ಮಾಡಿಸಲಾಗಿದೆ. ಎರಡು ದಿನದಲ್ಲಿ ಬೇರೆಡೆ ಕಸ ವಿಲೇವಾರಿ ಮಾಡಿಸಲಾಗುವುದು ಎಂದರು.

ಒಂದು ವೇಳೆ ಇಲ್ಲಿ ಅತೀ ಕ್ರಮಣ ಕಟ್ಟಡ ನಿರ್ಮಾಣವಾಗುತ್ತಿದ್ದರೆ ನೋಟಿಸ್ ನೀಡಿ ಪುರಸಭೆ ಕ್ರಮ ಕೈಗೊಳ್ಳಬಹುದು. ಆದರೆ ಅದರ ಬದಲಾಗಿ ಕಸ ಹಾಕುವುದು ಎಷ್ಟು ಸೂಕ್ತ..? ಎನ್ನುವುದು ಸ್ಥಳೀಯರ ಪ್ರಶ್ನೆ.

Exit mobile version