ಮಕ್ಕಳೇ ಮಕ್ಕಳೇ ಕಥೆಯ ಬರೆಯಿರಿ ಸ್ಪರ್ಧೆ

ಬೆಂಗಳೂರು: ರಂಗ ನಿರ್ದೇಶಕ, ನಟ ಮತ್ತು ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಮಹಾಮನೆ ಈ ಸಾಲಿನ ಮಕ್ಕಳ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಸಿವಗಂಗ ಪ್ರಕಾಶನದಿಂದ ಆಯ್ಕೆಯಾದ ಅತ್ಯುತ್ತಮ ಕತೆಗಳನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಕಥಾ ಸ್ಪರ್ಧೆಯ ನಿಯಮಗಳು

  1. ಕಥೆಯನ್ನು ಮಕ್ಕಳೇ ತಮ್ಮ ಸ್ವಹಸ್ತದಿಂದ ಬರೆಯಬೇಕು
  2. ಕಥೆಯ ಕನ್ನಡದಲ್ಲೇ ಬರೆಯಬೇಕು
  3. ಕಥೆಯು A4 ಅಳತೆಯ ಹಾಳೆಯಲ್ಲಿ ಕೈ ಬರಹದಲ್ಲಿದ್ದು 9 ಐದು ಪುಟಗಳಷ್ಟೇ ಇರಬೇಕು
  4. ಐದುನೂರು (500) ಪದಗಳನ್ನೂ ಮೀರಿರಬಾರದು
  5. ಕಥೆಯನ್ನು ನಮಗೆ ತಲುಪಿಸುವ ಕೊನೆಯ ದಿನಾಂಕ 31/7/2020. ಆ ನಂತರ ಬಂದ ಕಥೆಯನ್ನು ಸ್ಪರ್ಧೆಗೆ ಸ್ವೀಕರಿಸುವುದಿಲ್ಲ.
  6. ತೀರ್ಪುಗಾರರ ಆಯ್ಕೆಯೇ ಅಂತಿಮ
  7. ಕಥೆಗಳನ್ನು ಕಳಿಸಲು ಯಾವುದೇ ಶುಲ್ಕವಿಲ್ಲ
  8. ಒಬ್ಬರು ಒಂದೇ ಕಥೆ ಕಳಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮ (Pen Name ) ದಿಂದ ಕಥೆಯನ್ನು ಬರೆದಿರಬಾರದು
  9. ಕೆಂಗೇರಿ ಉಪನಗರದ ಸುತ್ತಮುತ್ತಲಿನ ಬಡಾವಣೆಯ ಮಕ್ಕಳ ಅತ್ಯುತ್ತಮ 75 ಕಥೆಗಳನ್ನು ಹಾಗೂ ಉಳಿದ ಭಾಗದ 25 ಮಕ್ಕಳ ಅತ್ಯುತ್ತಮ ಕಥೆಗಳನ್ನು ಸ್ವರ್ಧೆಯ ಬಹುಮಾನಕ್ಕೆ ಆಯ್ಕಮಾಡಲಾಗುವುದು
  10. ಆಯ್ಕೆಯಾದ ಕಥೆಗಳನ್ನು ಪುಸ್ತಕ ರೂಪದಲ್ಲಿ ‘ಸಿವಗಂಗ ಪ್ರಕಾಶನ’ ದಿಂದ ಪ್ರಕಟಿಸಿ 2021 ಜನವರಿಯಲ್ಲಿ ಸಿವಗಂಗ ರಂಗಮಂದಿರದಲ್ಲಿ ಪುಸ್ತಕ ಸಮಾರಂಭ ನಡೆಸಿ ಬಿಡುಗಡೆ ಮಾಡಲಾಗುವುದು
  11. ಡಿಸೆಂಬರ್ 2020ರಲ್ಲಿ ಆಯ್ಕೆಯಾದ ಕಥೆಯ ಹಾಗೂ ಕಥೆಗಾರರ ಹೆಸರನ್ನು ಪ್ರಕಟಿಸಲಾಗುವುದು. ಈ ಕುರಿತು ಮಾಹಿತಿ ತಿಳಿಯಲು ಯಾರೂ ಕೂಡ ಪದೇ ಪದೇ ಫೋನ್ ಮಾಡಕೂಡದು
  12. ಕಥೆಯ ಹೆಸರು. ಕಥೆಗಾರರ ಹೆಸರು. ವಿಳಾಸ ಹಾಗೂ ಮೊಬೈಲ್ ನಂಬರನ್ನು ಸ್ಪುಟವಾಗಿ ಬರೆದಿರಬೇಕು
  13. ಸ್ಪರ್ಧೆಗೆ ಈಗಾಗಲೇ ಪ್ರಕಟವಾದ ಕಥೆ ಕಳಿಸಕೂಡದು. ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು.
  14. ಅಕ್ಷರ ದೋಷವಿಲ್ಲದ ಹಾಗೂ ವ್ಯಾಕರಣ ದೋಷವಿಲ್ಲದ ಹಾಗೂ ಸುಂದರ ಬರಹವುಳ್ಳ ಮತ್ತು ವಸ್ತು ವೈವಿಧ್ಯವಿರುವ ಉತ್ತಮ ಶೈಲಿಯ ನೀತಿ ಇರುವ ಕಥೆಗಳನ್ನು ಪ್ರಕಟಣೆಗೆ ಆಯ್ಕೆ ಮಾಡಲಾಗುವುದು
  15. ಆಯ್ಕೆಗಾರರ ತೀರ್ಪೇ ಅಂತಿಮ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ

ಕಥೆ ಬರೆಯಲು ನಿಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ. ನಿಮ್ಮ ಮಕ್ಕಳಿಂದ ಚಂದ ಕಥೆ ನಮಗೆ ಬರಲಿ. ನಾಡಿಗೆ ತಲುಪಲಿ

ಕಥೆಗಳನ್ನು ಕಳುಹಿಸಬೇಕಾದ ವಿಳಾಸ:

ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಸಿವಗಂಗ ರಂಗಮಂದಿರ, 3386 ಮಹಾಮನೆ, ಸರ್, ಎಂ, ವಿ ಲೇಔಟ್ 1ನೇ ವಿಭಾಗ , ಕೆಂಗೇರಿ ಉಪನಗರ, ಬೆಂಗಳೂರು 560060, ಮೊ: 9448970731

Exit mobile version