ಬೀಗ ನಿರಾಣಿ ಪರ ಬ್ಯಾಟ್ ಬೀಸಿದ ಜಿ.ಎಂ.ಸಿದ್ದೇಶ್…!

ಬೆಂಗಳೂರು: ಇತ್ತಿಚೆಗಷ್ಟೆ ಬಿಜೆಪಿಯಲ್ಲಿ ರಾಜಕೀಯದಾಟದ ಸದ್ದು ಜೋರಾಗಿಯೇ ಕೇಳಿತ್ತು. ಶಾಸಕ ಉಮೇಶ್ ಕತ್ತಿ ಮನೆಯಲ್ಲಿನ ಶೀಕರಣಿ ಊಟ ಏನುಬಕರಾಮತ್ತು ಮಾಡುತ್ತದೆಯೋ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು‌. ಸಭೆ ನಡೆಸಿದರು ಎನ್ನಲಾದ ಅತೃಪ್ತರಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಮಾಜಿ ಸಚಿವ ಮುರಗೇಶ್ ನಿರಾಣಿ ಕೂಡ ಇದ್ದರು ಎನ್ನಲಾಗಿದೆ.
ಈ ಹಿಂದಿನ ಅವಧಿಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಬಹಳಷ್ಟು ಪ್ರಭಾವಿಯಾಗಿದ್ದ ಮುರಗೇಶ್ ನಿರಾಣಿ ಅವರು ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಅತೃಪ್ತಿಯಲ್ಲಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಅತೃಪ್ತ ಶಾಸಕ ಪಡೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಮುರಗೇಶ್ ನಿರಾಣಿ ಪರ ಸಂಸದ ಜಿ.ಎಂ.ಸಿದ್ದೇಶ್ ಬ್ಯಾಟ್ ಬೀಸಿದ್ದು ವಿಶೇಷ.
ನಡತೆಯಲ್ಲಿ ಅಳಿಯ- ಮಾವ ಆಗುವ ನಿರಾಣಿ ಹಾಗೂ ಸಿದ್ದೇಶ್ ಅವರು ಒಬ್ಬರು ಶಾಸಕರಾದರೆ ಮತ್ತೊಬ್ಬರು ಸಂಸದರು. ಆದರೆ ಈ ಎಲ್ಲ ಬೆಳವಣಿಗೆಗಳ ಮದ್ಯೆ ಇಂದು ಸಂಸದ ಸಿದ್ದೇಶ್ ಅಳಿಯ ನಿರಾಣಿ ಪರ ಬ್ಯಾಟ್ ಬೀಸಿದ್ದು ರಾಜಕೀಯ ಪರಿಣಿತರ ಕುತೂಹಲಕ್ಕೆ ಕಾರಣವಾಗಿದೆ.
ಸಭೆ ನಡೆದಿದ್ದರಲ್ಲಿ ನಿರಾಣಿ ಪಾತ್ರ ಏನೂ ಇಲ್ಲ, ಮೂರು ವರ್ಷ ಬಿಎಸ್ ವೈ ಸಿಎಂ ಆಗಿರುತ್ತಾರೆ. ಹುಡುಗರ ರೀತಿ ಓಡಾಡಿ ಬಿಎಸ್ ವೈ ಕೆಲಸ ಮಾಡುತ್ತಿದ್ದಾರೆ. ಬಿಎಸ್ ವೈ ನಮ್ಮೆಲ್ಲರ ಪ್ರಶ್ನಾತೀತ ನಾಯಕರು. ಕೆಲವರಿಗೆ ಮಂತ್ರಿ ಮಾಡಿಲ್ಲ ಎನ್ನುವ ಅಸಮಧಾನ ಇರಬಹುದು. ಕೆಲ ಹಿರಿಯರಿಗೆ ಮಂತ್ರಿ ಆಗಬೇಕು ಎಂಬ ಆಸೆ ಇದೆ. ಕೊರೊನಾ ಹೋದ ಮೇಲೆ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತೇವೆ ಯಾರಿಗೂ ಅನ್ಯಾಯ ಆಗೋದಿಲ್ಲ ಅಲ್ಲಿಯವರೆಗೆ ಶಾಂತಿಯಿಂದ ಇದ್ದರೆ ಒಳ್ಳೆಯದು ಎಂದಿದ್ದಾರೆ.
ಸಂಸದರ ಈ ಮಾತು ಸಚಿವ ಸಂಪುಟ ವಿಸ್ತರಣೆಯಲ್ಲಿ ನಿರಾಣಿ ಮಂತ್ರಿಗಿರಿ ಪಡಿತಾರಾ? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.

Exit mobile version