ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಗದಗ: ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು. ದೇಶದಲ್ಲಿ ಅತೀ ಹೆಚ್ಚು ಸೋಂಕಿತರು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದರಿಂದ ಮುಖ್ಯವಾಗಿ ಈಗಾಗಲೇ ಮಹಾರಾಷ್ಟ್ರದಿಂದ ಬಂದಿರುವ ವಲಸಿಗರಲ್ಲೆ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ರೈಲು ನಿಲ್ದಾಣದಲ್ಲಿ ಹೆಚ್ಚು ನಿಗಾವಹಿಸಲಾಗಿತ್ತು.

ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ವೈದ್ಯರು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಿದರು. ನಂತರ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ಮುಂಬೈನಿಂದ ಜನ ಆಗಮಿಸಿದ ಹಿನ್ನೆಲೆ ಸ್ಥಳದಲ್ಲಿ ಸ್ವತಃ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಜರಿದ್ದರು. ಬಂದ ಜನರಿಗೆ ಎರಡು ಕೌಂಟರ್ ನಲ್ಲಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸಿಪಿಐ ಬಿ.ಎ.ಬಿರಾದಾರ ನೇತೃತ್ವದಲ್ಲಿ 25 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. 17 ಜನ ರೈಲ್ವೇ ಪೊಲೀಸ್ ಹಾಗೂ 10 ಆರ್ಪಿಎಫ್ ಪೊಲೀಸರನ್ನು ನಿಯೋಜಿಸಲಾಗಿತ್ತು.

ಎಸ್ಪಿ ಯತೀಶ್ , ಎಸಿ ರಾಯಪ್ಪ, ತಹಶಿಲ್ದಾರ ಶ್ರೀನಿವಾಸ್ ಮೂರ್ತಿ, ಉಪ ತಹಶಿಲ್ದಾರ ಸಂಜೀವ್ ಸಿಂಪರ್  ಇದ್ದರು.

Exit mobile version