ಇಂಧಿರಾಗಾಂಧಿ ಭಾವಚಿತ್ರಕ್ಕೆ ಮಸಿ: ಆರೋಪಿ ಬಂಧನ

ದಾವಣಗೆರೆ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಉಮೇಶ್ ಕತ್ತಿ(36) ಬಂಧಿತ ಆರೋಪಿಯಾಗಿದ್ದು, ಯಲಹಂಕ ಪ್ಲೈ ಓವರ್ ಗೆ ವೀರಸಾವರ್ಕರ್ ಹೆಸರಿಡಲು ಕೆಲ ಕಾಂಗ್ರೆಸ್ ನವರು ವಿರೋಧ ವ್ಯಕ್ತ ಪಡಿಸಿದ್ದು ಹಿಂದೂ ದೇಶ ಅಭಿಮಾನಿಯಾದ ನನಗೆ ನೋವು ಉಂಟಾಗಿತ್ತು. ಈ ಕಾರಣಕ್ಕೆ ಉದ್ದೇಶಪೂರ್ವಕವಾಗಿ ನಾನು ವೇಸ್ಟ್ ಆಯಿಲ್ ಹಾಕಿ ಇಂದಿರಾಗಾಂಧಿ ಭಾವಚಿತ್ರ ವಿರೂಪಗೊಳಿಸಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಈತ ಈ ಹಿಂದೆ ರೌಡಿಸಂ ಕೃತ್ಯದಲ್ಲಿ ಭಾಗಿಯಾಗಿದ್ದು ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು.

Exit mobile version