ಪುರಸಭೆ ಸದಸ್ಯನಿಗೆ ಕೊರೊನಾ ಪಾಸಿಟಿವ್

ಮಸ್ಕಿ: ಪಟ್ಟಣದ ಪುರಸಭೆ ಸದಸ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಮಾಸಂಗಿಪುರದ ನಾಗರಿಕರಲ್ಲಿ ಆತಂಕ ಮನೆಮಾಡಿದೆ.

ಈ ಹಿಂದೆ ಬ್ಯಾಂಕ್ ಉದ್ಯೋಗಿ ಒಬ್ಬರಿಗೆ ಕೋವಿಡ್-19 ದೃಢ ಪಟ್ಟಿತ್ತು. ಅವರ ಜೊತೆ ಪುರಸಭೆ ಸದಸ್ಯ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಪುರಸಭೆ ಸದಸ್ಯನಿಗೂ ಕೊರೊನಾ ಪ್ರಕರಣ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ರಾಯಚೂರಿನ ಐಸೋಲೇಷನ್ ಗೆ ಕಳುಹಿಸಲಾಗಿದೆ.

ಪುರಸಭೆ ಸದಸ್ಯ ವಾಸಿಸುವ ಬಡಾವಣೆ ಸುತ್ತಮುತ್ತ ಪೊಲೀಸರು ಸಂಪೂರ್ಣ ಸೀಲ್ ಡೌನ್ ಮಾಡಿದರು. ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಐ ದೀಪಕ್ ಬೂಸರೆಡ್ಡಿ, ಪಿ ಎಸ್ ಐ ಸಣ್ಣ ಈರೇಶ,  ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳವುದರ ಬಗ್ಗೆ ಚರ್ಚಿಸಿದರು.

ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಕ್ವಾರೆಂಟೈನ್ ಮಾಡಿ ಕೊರೊನಾ ಹರಡದಂತೆ ತಾಲೂಕ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Exit mobile version