ತಾಜ್ ಮಹಲ್ ಗೆ ಸಿಡಿಲು – ಹಾನಿ!

ಆಗ್ರಾ: ಸಿಡಿಲು ಬಡಿದ ಪರಿಣಾಮ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಹಾನಿಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ನಿನ್ನೆ ಸುರಿದ ಗುಡುಗು ಸಹಿತ ಹೆಚ್ಚಿನ ಮಳೆಗೆ ತಾಜ್ ಮಹಲ್ ನ ಮುಖ್ಯ ಸಮಾಧಿ ಮತ್ತು ಕೆಂಪು ಮರಳುಗಲ್ಲಿನ ಅಮೃತಶಿಲೆ ರೇಲಿಂಗ್ ಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಆವರಣದಲ್ಲಿನ ಕೆಲವು ಮರಗಳು ಬುಡಸಮೇತ ಉರುಳಿ ಬಿದ್ದಿವೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸೂಪರಿಂಟೆಂಡೆಂಟ್ ಬಸಂತ್ ಕುಮಾರ್ ಸ್ವರ್ಣ್ ಕರ್ ತಿಳಿಸಿದ್ದಾರೆ.

ತಾಜ್ ಮಹಲ್ ಫಾಲ್ಸ್ ಸೀಲಿಂಗ್ ಕೂಡ ಬಿದ್ದಿದೆ. ಮೆಹ್ತಾಬ್ ಬಾಗ್ ಮತ್ತು ಮರಿಯಮ್ ಮಕ್ಬಾರದಲ್ಲಿ ಮರಗಳು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version