ಪ್ಯಾಂಗೊಲಿನ್ ಗೂ ನಡೆಯಿತು ಕೊರೊನಾ ಪರೀಕ್ಷೆ!

ಭುವನೇಶ್ವರ್: ಕ್ವಾರಂಟೈನ್ ಸೆಂಟರ್ ಬಳಿ ಹೆಣ್ಣು ಪ್ಯಾಂಗೊಲಿನ್ ಗೆ ಕೊರೊನಾ ಪರೀಕ್ಷೆ ನಡೆದಿದೆ. ಬಾರಂಬಾ ವಲಯದ ಮಹುಲಿಯಾ ಯುಜಿಎಂಇ ಶಾಲೆಯ ಬಳಿ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರದ ಬಳಿ ಐದು ವರ್ಷದ ಹೆಣ್ಣು ಪ್ಯಾಂಗೊಲಿನ್ ನನ್ನು ರಕ್ಷಿಸಲಾಗಿತ್ತು. ಅರಣ್ಯ ಅಧಿಕಾರಿಗಳು ಅದನ್ನು ರಕ್ಷಿಸಿದ್ದರು. ಪ್ಯಾಂಗೊಲಿನ್ ರಕ್ಷಿಸಲಾದ ಕ್ವಾರಂಟೈನ್ ಕೇಂದ್ರದ ಬಳಿ 42 ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಅದನ್ನು ಕಾಡಿಗೆ ಬಿಡುವ ಮುನ್ನ ಸ್ವಾಬನ್ನು ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ಯಾಂಗೊಲಿನ್ ನಿಂದ ಸ್ವಾಬ್ ಕಲೆಹಾಕಿದ ನಂತರ ಅದನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವನ್ಯಜೀವಿ ಆರೋಗ್ಯ ಕೇಂದ್ರದ  ಅಧಿಕಾರಿಗಳು ತಿಳಿಸಿದ್ದಾರೆ. ಮನುಷ್ಯರ ಸ್ವಾಬ್ ಪರೀಕ್ಷೆಯಂತೆ ಯಾವುದೇ ಪ್ರಯೋಗಾಲಯದಲ್ಲಾದರೂ ಪ್ಯಾಂಗೊಲಿನ್ ಪರೀಕ್ಷೆ ನಡೆಸಬಹುದು ಎಂದು ಪ್ರಿವೆಂಟಿವ್ ಔಷಧ ಇಲಾಖೆ ಮುಖ್ಯಸ್ಥ ಡಾ. ನಿರಂಜನ್ ಶಾಹೂ ತಿಳಿಸಿದ್ದಾರೆ.

Exit mobile version