ಹಾವೇರಿ ಜಿಲ್ಲೆಯ ಜನತೆಗೆ ಮೊದಲ ಸಿಹಿ ಸುದ್ದಿ.

ಹಾವೇರಿ: 40 ವರ್ಷದ ಕರೊನಾ ಸೋಂಕಿತ ವ್ಯಕ್ತಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಹಾವೆರಿ ಜಿಲ್ಲೆಯ ಜನತೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪಿ-672 ಸೋಂಕಿತ ಗುಣಮುಖವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಗುಲಾಬಿ ಹೂವು ಕೊಟ್ಟು, ಚಪ್ಪಾಳೆ ತಟ್ಟಿ ಗುಣಮುಖ ರೋಗಿಯನ್ನು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂಧಿಗಳು ಬಿಳ್ಕೊಟ್ಟರು.

ಈ ವೇಳೆ ಡಿ.ಹೆಚ್.ಓ ಡಾ.ರಾಜೇಂದ್ರ ದೊಡ್ಡಮನಿ ನೇತೃತ್ವದಲ್ಲಿ ಬಿಳ್ಕೊಡಲಾಯಿತು. ಅಂಬ್ಯುಲೆನ್ಸ್ ನಲ್ಲಿ ಸವಣೂರು ಪಟ್ಟಣದ ನಿವಾಸಕ್ಕೆ ಜಿಲ್ಲಾಡಳಿತದ ವತಿಯಿಂದ ಕಳುಹಿಸಿಕೊಡಲಾಯಿತು. ಗುಣಮುಖ ಹೊಂದಿದ ವ್ಯಕ್ತಿ ಹದಿನಾಲ್ಕು ದಿನಗಳ ಕಾಲ ಹೋಮ್ ಕ್ವಾರೆಂಟೈನ್ ಆಗಲಿದ್ದಾರೆ.

ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರದ ನಿವಾಸಿ ಸಹೋದರನೊಂದಿಗೆ ಮಹಾರಾಷ್ಟ್ರದ ಮುಂಬೈಯಿಂದ ಅಕ್ರಮವಾಗಿ ಜಿಲ್ಲೆ ಪ್ರವೇಶ ಮಾಡಿದ್ದ ಎನ್ನಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಆರು ಕೊರೊನಾ ಕೇಸ್ ದಾಖಲಾಗಿವೆ. ಆರು ಕರೊನಾ ಸೋಂಕಿತರಲ್ಲಿ ಒಬ್ಬ ಬಿಡುಗಡೆ ಗೊಂದಿದಂತಾಗಿದೆ. ಉಳಿದ 5 ಕೇಸ್ ಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ��

Exit mobile version