ಏಲಕ್ಕಿ ನಾಡಿನಲ್ಲೂ ಖಾತೆ ತೆರೆದ ಕೊರೋನಾ

ಹಾವೇರಿ: ಈವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗದ ಹಿನ್ನೆಲೆ ಹಾವೇರಿ ಜಿಲ್ಲೆ ಗ್ರೀನ್ ಝೋನ್‌ನಲ್ಲಿತ್ತು. ಆದರೆ ಇದೀಗ ಹಾವೇರಿಯಲ್ಲೂ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಏಲಕ್ಕಿ ನಾಡಿನಲ್ಲಿ ಮಹಾಮಾರಿ ಕೊರೋನಾ ಖಾತೆ ತೆರೆದಿದೆ.

ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ 32 ವರ್ಷದ ಸೋಂಕಿತ ಮುಂಬೈನಿಂದ ಲಾರಿಯ‌ ಮುಖಾಂತರ ಏಪ್ರೀಲ್ 28ರಂದು ಜಿಲ್ಲೆಗೆ ಬಂದಿದ್ದಾಗಿ ತಿಳಿದು ಬಂದಿದೆ. ಈ ಸಂಬಂಧ ಲಾರಿಯೊಂದಿಗೆ ಪ್ರಯಾಣಿಸಿದ್ದ ಮೂರು ಜನರ ಸ್ವಾಬ್ ಟೆಸ್ಟ್ ಮಾಡಲಾಗಿದೆ.  ಅದರಲ್ಲಿ ಒಬ್ಬರಿಗೆ ಕೊರೊನಾ‌ ಪಾಸಿಟಿವ್ ಪತ್ತೆಯಾಗಿದೆ. 21 ಜನರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಹಾಗೂ ದ್ವಿತೀಯ ಹಂತದಲ್ಲಿ ಒಟ್ಟು 15 ಜನರನ್ನು ಸಂಪರ್ಕ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರಿಂದ ಮಾಧ್ಯಮಗಳಿಗೆಮಾಹಿತಿ

ಸೋಂಕಿತ ವ್ಯಕ್ತಿಗಯೊಂದಿಗೆ ಲಾರಿಯಲ್ಲಿ ಪ್ರಯಾಣಿಸಿದ್ದ  42 ವರ್ಷದ ಅಣ್ಣ ಹಾಗೂ 19 ವರ್ಷದ ಮಗನ ಸ್ವ್ಯಾಬ್ ಟೆಸ್ಟ್‌ಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಕೊರೋನಾ ಸೋಂಕು ಪತ್ತೆಯಿಂದಾಗಿ ಏಲಕ್ಕಿ ನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ.

Exit mobile version