ಬೆಂಗಳೂರು: ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ 58 ದಿನ ಬಂದ್ ಆಗಿದ್ದ ನಗರದ ಸಲೂನ್, ಪಾರ್ಲರ್’ಗಳು ತನ್ನ ಕಾರ್ಯಗಳನ್ನು ಆರಂಭಿಸಿವೆ. ಈ ನಡುವಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿರುವ ಸರ್ಕಾರ ಸಲೂನ್ ಹಾಗೂ ಪಾರ್ಲರ್ ಗಳಿಗೆ ನಿಯಮಗಳನ್ನು ವಿಧಿಸಿದೆ.
ಹಲವು ಅಂಶಗಳುಳ್ಳ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಅವುಗಳು ಇಂತಿವೆ…
ಸರ್ಕಾರ ನೀಡಿದ ಸೂಚನೆಗಳು
ಅಂಗಡಿ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಟ್ಟಿರಬೇಕು.
ಅಂಗಡಿಯ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ತಲೆಗವಸು ಮತ್ತು ಎಪ್ರಾನ್ ಧರಿಸಬೇಕು.
ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವವರಿಗೆ ಅಂಗಡಿ ಪ್ರವೇಶಕ್ಕೆ ಅವಕಾಶ ನೀಡಬಾರದು.
ಮಾಸ್ಕ್ ಧರಿಸದೆ ಬರುವ ಗ್ರಾಹಕರಿಗೆ ಪ್ರವೇಶ ನೀಡಬಾರದು.
ಒಬ್ಬ ಗ್ರಾಹಕನಿಗೆ ಬಳಸಿದ ಟವಲ್, ಪೇಪರ್ ಶೀಟ್’ನ್ನು ಬೇರೊಬ್ಬರಿಗೆ ಬಳಸುವಂತಿಲ್ಲ.
ಪ್ರತೀ ಗ್ರಾಹಕನಿಗೆ ಕ್ಷೌರ ಮಾಡಿದ ಬಳಿಕ ಸಿಬ್ಬಂದಿ ಹ್ಯಾಂಡ್ ವಾಷ್ ಮಾಡಿಕೊಳ್ಳಬೇಕು.
ಒಬ್ಬ ಗ್ರಾಹಕನಿಗೆ ಬಳಸಿದ ವಸ್ತುಗಳನ್ನು ಮತ್ತೊಬ್ಬರಿಗೆ ಬಳಸುವುದಕ್ಕೂ ಮುನ್ನ ಶೇ.7ರಷ್ಟು ಲೈಸಾಲ್ ಹಾಕಿ 30 ನಿಮಿಷಗಳ ಕಾಲ ನೆನೆಸಿ ಶುದ್ಧ ಮಾಡಿದ ಬಳಿಕ ಶೇವಿಂಗ್ ಬಳಕೆ ಮಾಡಬೇಕು.
ಸಲೂನ್ ಹಾಗೂ ಪಾರ್ಲರ್ ಗಳು ಬಳಸುವ ವಸ್ತುಗಳನ್ನು ದ್ವಿಗುಣಗೊಳಿಸಿಕೊಳ್ಳಬೇಕು
ಗ್ರಾಹಕರಿಗೆ ಸಲೂನ್ ಹಾಗೂ ಪಾರ್ಲರ್ ಮಾಲೀಕರು ಟೋಕನ್ ಗಳನ್ನು ವಿತರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಒಬ್ಬ ಗ್ರಾಹಕನಿಂದ ಮತ್ತೊಬ್ಬ ಗ್ರಾಹನಿಗೆ ಕನಿಷ್ಟ 1 ಮೀಟರ್ ಆದರೂ ಅಂತರವಿರಬೇಕು.
ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಬಳಕೆ ಮಾಡಿ ಸಲೂನ್, ಪಾರ್ಲರ್ ಗಳ ಎಲ್ಲಾ ಮಹಡಿಗಳು, ಲಿಫ್ಟ್ ಗಳು, ವಿಶ್ರಾಂತಿ ಪ್ರದೇಶಗಳು, ಮೆಟ್ಟಿಲುಗಳು ಮತ್ತು ಹ್ಯಾಂಡ್ರೈಲ್‌ಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಬೇಕು.
