ಭಟ್ಕಳದಲ್ಲಿ ಈಗ ಕೊರೊನಾದ್ದೇ ಆಟ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ ಬರೋಬ್ಬರಿ 12 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಸೋಂಕಿಗೆ ಬಲಿಯಾಗಿದ್ದು, ಇಡೀ ಜಿಲ್ಲೆಯ ಜನರೇ ಬೆಚ್ಚಿ ಬೀಳುವಂತೆ ಮಾಡಿದೆ.

ಸದ್ಯ ಐದೂವರೆ ತಿಂಗಳ ಮಗುವಿನಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇಡೀ ಭಟ್ಕಳ ನಗರವನ್ನು ಸೀಲ್ಡೌತನ್ ಮಾಡಲಾಗಿದೆ. ಸದ್ಯ ಭಟ್ಕಳ ಹಾಟ್ ಸ್ಪಾಟ್ ತಾಣವಾಗಿದೆ. ಒಂದೇ ದಿನ 12 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ ಕಂಡಿದೆ.

ಭಟ್ಕಳದಿಂದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬದಿಂದಲೇ ಈ ಕೇಸ್ ಪತ್ತೆಯಾಗಿವೆ. ಮೇ. 5ರಂದು ಪಟ್ಟಣದ ಮದೀನಾ ಕಾಲೋನಿಯ 18 ವರ್ಷದ ಯುವತಿ ರೋಗಿ ನಂಬರ್ 659ರಿಂದಲೇ 12 ಜನರಿಗೆ ಸೋಂಕು ತಗುಲಿದೆ. ಯುವತಿಯ ಕುಟುಂಬದ 10 ಜನ ಹಾಗೂ ಪಕ್ಕದ ಮನೆಯ ಮಹಿಳೆ ಮತ್ತು ಅವರ ಸ್ನೇಹಿತೆಗೆ ಸೋಂಕು ತಗುಲಿದೆ.

ಹೀಗಾಗಿ ಮದೀನ ಕಾಲೋನಿಯನ್ನು ಹಾಟ್ಸ್ಪಾ ಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ನಗರವನ್ನು 5 ವಲಯಗಳಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಓರ್ವ ಪೊಲೀಸ್ ಅಧಿಕಾರಿ ಹಾಗೂ ವಲಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇಂದಿನಿಂದ ಭಟ್ಕಳದಲ್ಲಿ ಖಾಸಗಿ ವೈದ್ಯಕೀಯ ಸೇವೆ, ಮೆಡಿಕಲ್, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದು ಡಿಸಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.

Exit mobile version