ಒಬ್ಬ ವ್ಯಕ್ತಿಯಿಂದ ಇಡೀ ಹಿರೇಬಾಗೇವಾಡಿಯಲ್ಲಿ ಆವರಿಸಿದ ಸೋಂಕು!

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇಲ್ಲಯವರೆಗೂ ಜಿಲ್ಲೆಯಾದ್ಯಂತ 85 ಪ್ರಕರಣಗಳು ಪತ್ತೆಯಾಗಿದ್ದು, ಅರ್ಧಕ್ಕಿಂತ ಹೆಚ್ಚು ಒಂದೇ ಗ್ರಾಮದಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ.

ಶುಕ್ರವಾರ ಒಂದೇ ದಿನ 11 ಪ್ರಕರಣಗಳು ಪತ್ತೆಯಾಗಿದ್ದು, ಈ 11 ಪ್ರಕರಣಗಳ ಪೈಕಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ 10 ಪ್ರಕರಣಗಳು ಪತ್ತೆಯಾಗಿವೆ. ಇನ್ನೊಂದು ಪ್ರಕರಣ ಕುಡಚಿಯಲ್ಲಿ ಪತ್ತೆಯಾಗಿದೆ. ರೋಗಿ ನಂಬರ್ 128ರ 20 ವರ್ಷದ ಯುವಕನಿಂದಲೇ ಹಿರೇಬಾಗೇವಾಡಿ ಗ್ರಾಮದಲ್ಲಿ ಬರೋಬ್ಬರಿ 46 ಜನರಲ್ಲಿ ಸೋಂಕು ಹಬ್ಬಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರಿರುವ ಗ್ರಾಮವಾಗಿ ಹಿರೇಬಾಗೇವಾಡಿ ಬದಲಾಗಿದೆ. ಇಲ್ಲಿಯವರೆಗೂ ಇಲ್ಲಿ 47 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರೈತರಿಗೂ ಕೂಡ ಕೊರೊನಾ ವಕ್ಕರಿಸಿದ್ದು, ಇಡೀ ಗ್ರಾಮದ ಜನ ಭಯದಲ್ಲಿ ಬದುಕುವಂತಾಗಿದೆ.

ಇನ್ನೊಂದೆಡೆ ಜಿಲ್ಲೆಯ ರಾಯಬಾಗ ತಾಲೂಕಿನ 50 ವರ್ಷದ ಮಹಿಳೆಯಿಂದ 20 ವರ್ಷದ ಮಗನಿಗೆ ಸೋಂಕು ತಗುಲಿದೆ. ಕಳೆದ ನಾಲ್ಕು ದಿನಗಳ ಹಿಂದೆ ತೋಟದ ಮನೆಯಲ್ಲಿ ವಾಸವಿದ್ದ ಗಂಡ – ಹೆಂಡತಿಗೆ ಸೋಂಕು ತಗುಲಿತ್ತು. ಸದ್ಯ ಮಗನಿಗೂ ಸೋಂಕು ತಗುಲಿ ಇಡೀ ಕುಟುಂಬಕ್ಕೆ ಸೋಂಕು ವ್ಯಾಪಿಸಿದೆ.

Exit mobile version