ಅಪ್ಪಾ.. ಅಪ್ಪಾ ಬೇಗ ಬಾ ಅಪ್ಪಾ ಎಂದ ಕಂದನನ್ನು ಮೊಬೈಲ್ ನಲ್ಲಿಯೇ ನೋಡಿ ಖುಷಿಪಟ್ಟ ವೈದ್ಯ

ಬಾಗಲಕೋಟೆ : ಕೊರೊನಾ ಮಹಾಮಾರಿಯನ್ನು ಹೊಡೆದೊಡಿಸಲು ಪಣತೊಟ್ಟಿರುವ ವೈದ್ಯರು ಸದ್ಯ ತಮ್ಮ ಕುಟುಂಬವನ್ನೇ ಮರೆತಿದ್ದಾರೆ. ಈ ಯುದ್ಧದಲ್ಲಿ ತಿಂಗಳುಗಟ್ಟಲೇ ಪತ್ನಿ, ಮಕ್ಕಳು ತಂದೆ ತಾಯಿಯಿಂದ ದೂರವಿರುವ ಇಲ್ಲಿಯ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ವಿಡಿಯೋ ಕಾಲ್ ಮಾಡಿ ಕುಶಲೋಪರಿ ವಿಚಾರಿಸಿದರು.

ಕೊರೊನಾ ಆಸ್ಪತ್ರೆಯಲ್ಲಿ ನೂಡಲ್ ಅಧಿಕಾರಿಯಾಗಿರುವ ಚಂದ್ರಕಾಂತ ಜವಳಿ ಕಳೆದ ಒಂದೂವರೆ ತಿಂಗಳಿಂದ ಕೊರೊನಾ ಪ್ರಕರಣಗಳ ಮಾಹಿತಿ ಅಂಕಿ ಅಂಶ ದಾಖಲಾತಿ ಕಾರ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ ಗುಳೇದಗುಡ್ಡ ಪಟ್ಟಣದಲ್ಲಿರುವ ತಂದೆ, ತಾಯಿ, ಪತ್ನಿ ಮಕ್ಕಳ ಭೇಟಿ ಮಾಡಿಲ್ಲ. ಕೊರೊನಾ ಕರ್ತವ್ಯದಲ್ಲಿರುವ ವೈದ್ಯ ಚಂದ್ರಕಾಂತ ಕುಟುಂಬ ಜೊತೆಗಿನ ಸಂಭ್ರಮ ತ್ಯಾಗ ಮಾಡಿದ್ದಾರೆ. ಕುಟುಂಬಸ್ಥರಿಂದ ದೂರ ಇರುವ ಅವರು ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

ಪತ್ನಿ, ಮಕ್ಕಳು, ತಂದೆ, ತಾಯಿ ಜೊತೆ ಮಾತನಾಡಿದ್ದು, ಕೆಲ ಕಾಲ ಮಾತನಾಡುವ ಮೂಲಕ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳು ಮನೆಗೆ ಬಾ ಎಂದು ಕರೆದಿದ್ದು, ಕೊರೊನಾ ಹಾವಳಿ ಮುಗಿದ ನಂತರ ಬರುತ್ತೇನೆ ಎಂದು ಹೇಳಿದ್ದಾರೆ. ಮಕ್ಕಳು ಅಪ್ಪನನ್ನು ನೋಡುತ್ತಲೇ ಅಪ್ಪಾ ಬೇಗ ಬಾ ಅಪ್ಪಾ ಎಂದು ಮಗು ಕೇಳಿಕೊಂಡಿದೆ. ನಿಜಕ್ಕೂ ವೈದ್ಯಕೀಯ ಸಿಬ್ಬಂಧಿಗಳ ಕಾರ್ಯ ಹಾಗೂ ತ್ಯಾಗ ಮಾತ್ರ ಪ್ರಶಂಸನೀಯ.

Exit mobile version