ಎಮ್.ಎಲ್.ಎ ಸಾಹೇಬರೆ ಮಾಸ್ಕ್ ಹಾಕ್ಕೊಳ್ಳಿ ಪ್ಲೀಸ್..!

ಹಾವೇರಿ: ಪಡಿತರ ಅಂಗಡಿಗೆ ಭೇಟಿ ನೀಡಿದ ಶಾಸಕರೊಬ್ಬರು ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆ ವಹಿಸಬೇಕಾದ ಜಾಗೃತಿ ಕ್ರಮಗಳ ಕುರಿತು ಜನರಿಗೆ ತಿಳಿ ಹೇಳಿದ್ದಾರೆ. ಶಾಸಕರಾಗಿ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದರಲ್ಲ ಎನ್ನುವುದು ನಿಜವಾಗಿಯೂ ಪ್ರಶಂಸನೀಯವೇ. ಆದರೆ ಯಾವುದನ್ನು ಪಾಲನೆ ಮಾಡುವ ಕುರಿತು ಶಾಸಕರು ಮಾತನಾಡುತ್ತಿದ್ದರೋ ಅದನ್ನೇ ಶಾಸಕರು ಮರೆತಿದ್ದರು.

ಹೌದು ಮಾಸ್ಕ್ ಧರಿಸದ ಶಾಸಕರಿಂದ ಮಾಸ್ಕ್ ಕುರಿತು ಸಾರ್ವಜನಿಕರಿಗೆ ಪಾಠ ನೀಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಶಾಸಕರಿಂದ ನಡೆದಿದೆ. ಶಾಸಕ ಅರುಣಕುಮಾರ್ ಪೂಜಾರ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರಿಗೆ ಬುದ್ದಿವಾದ ಹೇಳಿದ್ದಾರೆ. ಆದರೆ ಜನರ ಮದ್ಯೆ ನಿಂತಾಗಲೂ ಶಾಸಕರೇ ಮಾಸ್ಕ್ ಹಾಕದಿರುವುದು ಮಾತ್ರ ಹಾಸ್ಯಾಸ್ಪದ. ಕರೋನಾ ಕೋವಿಡ್ ಭೀತಿಯಲ್ಲಿ ಶಾಸಕರು ಮಾಸ್ಕ್‌ನ್ನೆ‌ ಮರೇತರಾ? ಎನ್ನುವ ಪ್ರಶ್ನೆ ಕ್ಷೇತ್ರದ ಜನರದ್ದಾಗಿದೆ.

Exit mobile version