ವಲಸೆ ಕಾರ್ಮಿಕರ ರಕ್ಷಣೆಗಾಗಿ ಪೋಸ್ಟರ್ ನಾಳೆ ಪ್ರತಿಭಟನೆ

ರಾಜ್ಯದಲ್ಲಿನ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ನಾಳೆ ಸಾಮಾಜಿಕ ಜಾಲತಾಣಗಳ ಮೂಲಕ ಹ್ಯಾಶ್ ಟ್ಯಾಗ್ ಪ್ರತಿಭಟನೆಗೆ ರಾಜ್ಯದ ಜನಪರ,ರೈತಪರ,ಕಾರ್ಮಿಕ ಹಾಗೂ ಜೀವಪರ ಸಂಘಟನೆಗಳು ಮುಂದಾಗಿವೆ. ಪೋಸ್ಟರ್ ಪ್ರತಿಭಟನೆಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ಸಂಘಟನೆಗಳು ಮುಂದಾಗಿವೆ. ಈ ಕುರಿತಾದ ನಾಳೆಯ ಪ್ರತಿಭಟನೆಗೆ ವಿವಿಧ ಕಾರ್ಮಿಕ ಹಾಗೂ ಜೀವಪರ ಸಂಘಟನೆಗಳು ಜನರಲ್ಲಿ ಮಾಡಿಕೊಂಡ ಮನವಿ ಇಲ್ಲಿದೆ ನೋಡಿ..

ಸ್ನೇಹಿತರೆ…

ಕರ್ನಾಟಕ ಸರ್ಕಾರ ಬಿಲ್ಡರ್ ಲಾಬಿಯಾ ಒತ್ತಡಕ್ಕೆ ಒಳಗಾಗಿ, ವಲಸೆ ಕಾರ್ಮಿಕರನ್ನು, ಅವರ ಹಕ್ಕುಗಳನ್ನು ಬಲಿ ಕೊಡಲು ಹೊರಟಿದೆ.
ಕಳೆದ ಒಂದುವರೆ ತಿಂಗಳಿಂದ ವಲಸೆ ಕಾರ್ಮಿಕರು ಊಟ ಇಲ್ಲದೆ, ವೇತನ ವಿಲ್ಲದೆ ಹೇಳಲಾರದ ಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಅವರೆಲ್ಲ ಮನೆಗೆ ಹೋಗಲು ಬಯಸುತ್ತಿದ್ದಾರೆ. ಆದರೆ ನಮ್ಮ ಕ್ರೂರ ಸರ್ಕಾರ, ರೈಲುಗಳನ್ನು ನಿಲ್ಲಿಸಿ, ಅಮಾನೀಯವಾಗಿ ಕಾರ್ಮಿಕರನ್ನು ಇಲ್ಲಿಯೇ ಬಂಧಿಸಿ, ನಮ್ಮ ರಾಜ್ಯವನ್ನ ಬಹಿರಂಗ ಜೈಲು ಮಾಡಲು ಹೊರಟಿದೆ. ಇದು ಜೀತದ ಪದ್ಧತಿ ಇದ್ದಂತೆ. ಇದು ಸಂವಿಧಾನದ ಅನುಚ್ಛೇದ 23 ರ ಉಲ್ಲಂಘನೆ. ಹೀಗಾಗಿ ಕರ್ನಾಟಕದ ಜನರೆಲ್ಲ ಇದನ್ನು ವಿರೋಧಿಸಬೇಕೆಂದು ಕರೆ ನೀಡುತ್ತಿದ್ದೇವೆ.

ನಾಳೆ ಬೆಳಗ್ಗೆ (ಗುರುವಾರ 07 ಮೇ) , 9 ಘಂಟೆಗೆ ದಯವಿಟ್ಟು ನಿಮ್ಮ ನಿಮ್ಮ ಮನೆಗಳ ಮುಂದೆ ಪ್ಲಕಾರ್ಡ್ ಗಳು ಹಿಡಿದು ವಲಸಕ್ಕಿ ಕಾರ್ಮಿಕರಿಗೆ ಸಾಥ್ ನೀಡಿ. ಮನೆಗೆ ಹೋಗುವುದು, ಪ್ರತಿ ಕಾರ್ಮಿಕರ ಹಕ್ಕು. ಆ ಹಕ್ಕನ್ನು ಉಲ್ಲಂಘಿಸುವ ಬದಲು, ಆ ಹಕ್ಕನ್ನು ಪೂರೈಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕೋಣ.

ನಾಳೆ ಬೆಳಗ್ಗೆ 10 ಘಂಟೆಯಿಂದ ಮಧ್ಯಾಹ್ನ 12 ಘಂಟೆಯವರೆಗೆ, ಟ್ವಿಟ್ಟರ್ ಸ್ಟಾರ್ಮ್ ನಲ್ಲಿ ಸಹ ಭಾಗವಹಿಸಿ. #trainsformigrantsnow ಹಾಗೂ #ವಲಸಿಗರಿಗೆ ರೈಲು ನೀಡಿ ಎನ್ನುವ ಹ್ಯಾಶ ಟ್ಯಾಗ್ ಉಪಯೋಗಿಸಿ. ಹಾಗೆಯೇ ಈ ಅನ್ಯಾಯದ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ – cm@karnataka.gov.in ಎಂದು ಕರೆ ನೀಡಲಾಗಿದೆ.

Exit mobile version