ರಾಜ್ಯದಲ್ಲಿ ಇಂದು 22 ಕೊರೋನಾ ಪಾಸಿಟಿವ್ ಕೇಸ್ ಪತ್ತೆ

ಬೆಂಗಳೂರು: ಈ ಪ್ರಕರಣಗಳಲ್ಲಿ, ದಾವಣಗೆರೆಯಿಂದ 12, ಬೆಂಗಳೂರಿನಿಂದ 3, ಬಾಗಲಕೋಟೆಯಿಂದ 2, ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಧಾರವಾಡಗಳಿಂದ ತಲಾ‌ ಒಂದು ಪ್ರಕರಣಗಳು ಸೇರಿ ಒಟ್ಟು ರಾಜ್ಯದಲ್ಲಿ ಇಂದು 22 ಕೊರೋನಾ ಪಾಸಿಟಿವ್ ಕೇಸ್ ದೃಢಪಟ್ಟಿವೆ.

ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ 673 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5 ರ ಮಾಹಿತಿಯಂತೆ ಒಟ್ಟಾರೆ 29 ಜನ ಸಾವನ್ನಪ್ಪಿದ್ದು, 331 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ. ಉಳಿದ ಪ್ರಕರಣಗಳಲ್ಲಿ 307 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. 06 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ.

ರಾಜ್ಯಾದ್ಯಂತ ಒಟ್ಟು 26197 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 83806 ಮಾದರಿಗಳ ಪೈಕಿ 673 ಮಾದರಿಗಳು ಖಚಿತಗೊಂಡಿವೆ. ಇಂದು ಮತ್ತೆ 4613 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.  

ಕೋವಿಡ್ ಸೋಂಕಿನ ಅಂಕಿ ಅಂಶಗಳಲ್ಲಿ ಮಾರ್ಚ್ ನಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ, ಇಂದು ಹದಿಮೂರನೇ ಸ್ಥಾನದಲ್ಲಿದೆ ಶೇ.5.97 ನ ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ‌ ರಾಜ್ಯದ ‌ಸರಾಸರಿ ಶೇ.3.13 ಇದೆ.

Exit mobile version