ರಾಜ್ಯದಲ್ಲಿಂದು 178 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಇಂದು ರಾಜ್ಯದಲ್ಲಿ ಮತ್ತೆ 178 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ2711 ಆಗಿದೆ. ಇದರಲ್ಲಿ 1793 ಪ್ರಕರಣಗಳು ಸಕ್ರೀಯವಾಗಿವೆ. ಈವರೆಗೆ ಒಟ್ಟು ಕೊರೋನಾ ಸೋಂಕಿನಿಂದ 47 ಜನ ಸಾವನ್ನಪ್ಪಿದ್ದಾರೆ. ಇಂದು ಸೋಂಕಿನಿಂದ ಗುಣಮುಖರಾಗಿ ರಾಜ್ಯದಲ್ಲಿ 35 ಜನ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 869 ಜನ. ಇಂದು ಪತ್ತೆಯಾದ 178 ಸೋಂಕಿತ ಪ್ರಕರಣಗಳಲ್ಲಿ 156 ಪ್ರಕರಣಗಳಿಗೆ ಮಹಾರಾಷ್ಟ್ರದ ನಂಟಿದೆ. ಹೀಗಾಗಿ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು ರಾಜ್ಯದ ಜನರನ್ನು ಸಹಜವಾಗಿಯೇ ಆತಂಕಕ್ಕೀಡು ಮಾಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು

ಉಡುಪಿ-15
ಬೆಂಗಳೂರು-11
ಮಂಡ್ಯ-03
ಯಾದಗಿರಿ-54
ದಾವಣಗೆರೆ-04
ಮೈಸೂರು-02
ಕಲಬುರಗಿ-15
ರಾಯಚೂರು-62
ಶಿವಮೊಗ್ಗ-01
ಚಿಕ್ಕಬಳ್ಳಾಪೂರ-04
ಧಾರವಾಡ-01

Exit mobile version