ಗದಗ ಜಿಲ್ಲೆಯ ಹೂ ಬೆಳೆಗಾರರಿಗೆ ಕೋಟ್ಯಾಂತರ ರೂ, ನಷ್ಟ..!

ಗದಗ: ಲಾಕ್ ಡೌನ್ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಒಂದು ಕೋಟಿ ರೂಗಳಿಗೂ ಅಧಿಕ ಹೂ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ.

ಮಾರ್ಚ್ ರಿಂದ ಇಲ್ಲಿತನಕ ಕನಕಾಂಬರ 16 ಟನ್, ಚೆಂಡು ಹೂ 40 ಟನ್, ಮಲ್ಲಿಗೆ 238.92 ಟನ್, ಸೇವಂತಿಗೆ 619.73 ಟನ್, ಸುಗಂಧರಾಜ ಕಡ್ಡಿ ಹೂ 263.13 ಟನ್, ಗ್ಲಾಡಿಯೊಲಸ್ ಕಡ್ಡಿ ಹೂ 22.50 ಟನ್, ಗುಲಾಬಿ ಹೂ 4 ಟನ್,  ಸಂರಕ್ಷಿತ ಬೇಸಾಯದ ಅಡಿ ಬೆಳೆದ ಕಾರ್ನೇಶನ್ 4 ಟನ್, ಜರ್ಬೆರಾ ಹೂ 2 ಟನ್ ಸೇರಿದಂತೆ ವಿವಿಧ ತಳಿಯ 796.37 ಟನ್ ನಷ್ಟು ಹೂವಿನ ಬೆಳೆ ಮಾರುಕಟ್ಟೆಯಲ್ಲಿ ಮಾರಾಟವಾಗದೇ ಇರುವ ಕುರಿತು ಜಿಲ್ಲಾಧಿಕಾರಿ ಹಾಗೂ ಇಲಾಖೆಯ ನಿರ್ದೇಶನಲಾಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ಧಲಿಂಗೇಶ್ವರಗೌಡ ಎಚ್. ಪಾಟೀಲ ತಿಳಿಸಿದ್ದಾರೆ.

Exit mobile version