ಗದಗ: ಕೊವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ದೇಶಾದ್ಯಂತ ವಿಧಿಸಲಾದ ಲಾಕಡೌನ ಸಂದರ್ಭದಲ್ಲಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಅಥವಾ ಸ್ವಂತ ರಾಜ್ಯಕ್ಕೆ ಸ್ಥಳಕ್ಕೆ ಹೋಗಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು,ಪ್ರವಾಸಿಗರು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಬ್ಬರೇ ಆಗಿದ್ದಲ್ಲಿ ಆಧಾರ, ಚುನಾವಣಾ, ವಾಹನ ಚಾಲನೆ ಅಥವಾ ಪಾಸಪೋರ್ಟ್ ಗುರುತಿನ ಚೀಟಿ ಮತ್ತು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಲ್ಲಿ ಕುಟುಂಬದ ಭಾವಚಿತ್ರ ಕಡ್ಡಾಯವಾಗಿ ಸಲ್ಲಿಸಬೇಕು.
ಸೇವಾಸಿಂಧು ಕೇಂದ್ರಗಳು: ಕರ್ನಾಟಕ ಒನ್ ಕೇಂದ್ರ, ಎಲ್ಲ ತಹಶೀಲ್ದಾರರ ಕಾರ್ಯಲಯಗಳು, ನಾಡಕಚೇರಿಗಳು, ನಗರಸಭೆ, ಪುರಸಭೆ, ನಾಗರೀಕ ಸೇವಾ ಕೇಂದ್ರಗಳು, ಗ್ರಾಮ ಪಂಚಾಯತಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪ್ರಯಾನದ ಅನುಮತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು ಮತ್ತು ಆಯಾ ಕಚೇರಿಗಳವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವದನ್ನು ಕಡ್ಡಾಯವಾಗಿ ಅನುಸರಿಸುವ ನಿಯಮ ಕಡ್ಡಾಯವಾಗಿಸಿದೆ.
