ಕಲಾವಿದರಿಗೆ ಆರ್ಥಿಕ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಲ್ಲಿಕೆಗೆ ಇರುವ ನಿಯಮಗಳೇನು?

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಲ್ಲಿಕೆಗೆ ಇರುವ ನಿಯಮಗಳೇನು?

ಗದಗ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸಲು ರಾಜ್ಯದ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಭಂದಿಸಿ ಲಾಕಡೌನ್ ಘೋಷಿಸಲಾಗಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು ಮತ್ತು ಕಲಾತಂಡಗಳ ಪ್ರತಿ ಫಲಾನುಭವಿಗಳಿಗೆ ತಲಾ 3,000 ರೂ.ಗಳಂತೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ.
ಅರ್ಜಿದಾರರು ತಮ್ಮ ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ್ ಸಂಖ್ಯೆ, ಪಾಸ್ ಪೋರ್ಟ ಅಳತೆಯ ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸವಿವರಗಳನ್ನೊಳಗೊಂಡ ದಾಖಲೆಗಳನ್ನು ನಾಗರಿಕ ಸೇವಾ ಕೇಂದ್ರಗಳು ಅಥವಾ ಆನ್ ಲೈನ್ ನಲ್ಲಿ ಸೇವಾಸಿಂಧು ಪೋರ್ಟನಲ್ಲಿಯೇ ಕಡ್ಡಾಯವಾಗಿ ಭರ್ತಿ ಮಾಡಬೇಕು. ಗದಗ ಜಿಲ್ಲೆ ವ್ಯಾಪ್ತಿಯಲ್ಲಿರುವ ಕಲಾವಿದರು ಅಥವಾ ಕಲಾತಂಡದವರು ಮೇ.28 ಬೆಳಿಗ್ಗೆ 10 ಗಂಟೆಯಿAದ ಜೂನ್ 5 ರೋಳಗಾಗಿ sevasindhu.karnataka.gov.in ವೆಬ್ ಸೈಟ್‌ಗೆ ಬೇಟಿ ನೀಡುವ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲ್ಲಿಸಬಹುದಾಗದೆ
ಅರ್ಜಿದಾರರು ವೃತ್ತಿನಿರತರ ಕಲಾವಿದರಾಗಿರಬೇಕು, ಕನಿಷ್ಟ 35 ವರ್ಷ ಮೇಲ್ಪಟ್ಟಿರಬೇಕು, ಕನಿಷ್ಠ 10 ವರ್ಷಗಳ ಕಾಲ ಕಲಾಸೇವೆ ಮಾಡಿರುವ ಬಗ್ಗೆ ಪ್ರಶಸ್ತಿ ಪತ್ರಗಳು ಹಾಗೂ ಕಡ್ಡಾಯವಾಗಿ ಛಾಯಾಚಿತ್ರ ಮತ್ತು ಸಂಬAಧಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು. ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವ ಹಾಗೂ 2020-21ನೇ ಸಾಲಿನಲ್ಲಿ ಧನಸಹಾಯ ಪಡೆದ ಸಂಘ-ಸAಸ್ಥೆಗಳು, ಪದಾಧಿಕಾರಿಗಳು, ವಾದ್ಯಪರಿಕರ, ವೇಷಭೂಷಣ, ಚಿತ್ರಕಲೆ, ಶಿಲ್ಪಕಲೆಗೆ ಪ್ರೋತ್ಸಾಹಧನ ಪಡೆದ ಕಲಾವಿದರು ಈ ಸೌಲಭ್ಯ ಪಡೆಯಲು ಆರ್ಹರಾಗಿರುವುದಿಲ್ಲ.
ಆಯ್ಕೆ ಸಮಿತಿಯು ದಾಖಲಾತಿಯನ್ನು ಪರಿಶೀಲಿಸುವ ಮೂಲಕ ಅರ್ಹ ಫಲಾನುಭವಿಗಳನ್ನು ಅಯ್ಕೆ ಮಾಡಲಾಗುವುದು. ಅರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಒಂದು ಬಾರಿ ಮಾತ್ರ 3,000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ತಪುö್ಪ ಮಾಹಿತಿ ನೀಡಿ ಇದರ ಲಾಭ ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Exit mobile version