ಗದಗನಲ್ಲಿ ಮತ್ತೆ ನಾಲ್ಕು ಕೊರೋನಾ ಪಾಸಿಟಿವ್

ಗದಗ: ಕೊರೋನಾ ಸೋಂಕು ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಕಳೆದೆರಡು ದಿನಗಳ ಹಿಂದಷ್ಟೆ ಮೂರು ಕೊರೋನಾ ಪಾಸಿಟ್ ಕೇಸ್ ಪತ್ತೆಯಾಗಿದ್ದವು. ಇದರ ಬೆನ್ನಲ್ಲೆ ಇದೀಗ ಇಂದು ಮತ್ತೆ ನಾಲ್ಕು ಪಾಸಿಟಿವ್ ಕೇಸ್ ದೃಢಪಟ್ಟಿವೆ. ಇದರಿಂದ ಗದಗ ಜಿಲ್ಲೆ ಕೊರೋನಾ ಸೋಂಕು ಮುಕ್ತವಾಯಿತು ಎಂದು ನಿರಾಳರಾಗಿದ್ದ ಜನರಲ್ಲಿ ಮತ್ತೆ ಆತಂಕ ಮೂಡಿದೆ.

ಪಿ-970, ಪಿ-971, ಪಿ-972, ಪಿ-973 ಕೊರೋನಾ ಸೋಂಕಿತ ಕೇಸ್ ಗಳಾಗಿವೆ. ಇವರು ಗುಜರಾತಿನಿಂದ ಶರ್ಮಸಭೆಯೊಂದರಲ್ಲಿ ಭಾಗವಹಿಸಿ ಬಂದಿದ್ದರು ಎನ್ನಲಾಗಿದೆ. ಈ ಮೂಲಕ ಈವರೆಗೆ ಗುಣಮುಖರಾದ ಪ್ರಕರಣ ಸೇರಿ ಗದಗ ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ಪತ್ತೆಯಾದಂತಾಗಿದೆ.   

Exit mobile version