ಗದಗ ಜಿಲ್ಲೆಯಲ್ಲಿ ಬಾರ್ ಗಳ ಮುಂದೆ ಜನವೋ ಜನ

ಗದಗ: ಈಗಾಗಲೇ ಕಳೆದ ಒಂದುವರೆ ತಿಂಗಳಿಂದ ಲಾಕ್ ಡೌನ್ ಹಿನ್ನೆಲೆ ಬಾರ್ ಗಳನ್ನು ಬಂದ್ ಮಾಡಲಾಗಿತ್ತು. ಇನ್ನೇನು ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿ ಕೆಲವು ನಿಯಮ ವಿಧಿಸಿ ಬಾರ್ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದೆ ತಡ ಬಾರ್ ಗಳ ಮುಂದೆ ಜನವೋ ಜನ. ಗದಗ ಜಿಲ್ಲೆಯಲ್ಲಿ ಇಂದು ಇಂತಹ ದೃಷ್ಯಗಳು ಬಹುತೇಕ ಬಾರ್ ಗಳ ಮುಂದೆ ಕಂಡು ಬಂದಿತು.

ಗದಗ-ಬೆಟಗೇರಿ ಬಾರ್ ಗಳ ಮುಂದೆ ಜನಜಂಗುಳಿ

ಬಾರ್ ಮಾಲಿಕರಿಗೆ ಸರ್ಕಾರ ಕೆಲವು ನಿಬಂಧನೆಗಳನ್ನು ನೀಡಿದ್ದು ಅದರ ಪ್ರಕಾರ ಮದ್ಯ ಮಾರಾಟ ಮಾಡಲು ಸೂಚಿಸಿದೆ. ಇಂದು ಏಕಾಏಕಿ ಮದ್ಯಪ್ರೀಯರ ಹಾವಳಿ ಹೆಚ್ಚಾಗಬಾರದೆಂಬ ಕಾರಣಕ್ಕೆ ಬಾರ್ ಗಳ ಮುಂದೆ ಸರತಿಯಲ್ಲಿ ಬರಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಬಾಕ್ಸ್ ಗಳನ್ನು ಹಾಕಿ ಸರತಿಯಲ್ಲಿ ಬಂದು ಮದ್ಯೆ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಇನ್ನು ಗದಗ-ಬೆಟಗೇರಿ ಅವಳಿ ನಗರದಲ್ಲೂ 4 ಗಂಟೆಯಿಂದಲೇ ಬಹುತೇಕ ಬಾರ್ ಗಳ ಎದುರು ಸಾರಾಯಿಗಾಗಿ ಜನ ಕಾಯುತ್ತಿರುವ ದೃಷ್ಯಗಳು ಕಂಡು ಬಂದವು. ಮುಂಜಾಗೃತ ಕ್ರಮವಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Exit mobile version