ಗದಗ: ಕೊವಿಡ್-19 ನಿಯಂತ್ರಣ ಕುರಿತ ದೇಶವ್ಯಾಪಿ ಲಾಕ್ ಡೌನ ಸಂದರ್ಭದಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದ ಮಣಿಪುರ ರಾಜ್ಯದ ವಿದ್ಯಾರ್ಥಿಗಳ ಸಂಘಕ್ಕೆ 50 ಸಾವಿರ ರೂ.ಗಳ ಧನ ಸಹಾಯ ಮಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ ಅವರಿಗೆ ಮಣಿಪುರ ವಿದ್ಯಾರ್ಥಿ ಸಂಘ ಕೃತಜ್ಞತೆ ತಿಳಿಸಿದೆ.
ಸಂಸ್ಕಾರ ಭಾರತಿ ಸಂಸ್ಥೆಯ ಪ್ರದೀಪ್ ದ್ವಿವೇದಿ ತಮ್ಮ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಾಗ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಿ.ಸಿ.ಪಾಟೀಲ್ ಸ್ಪಂದಿಸಿದ್ದಾರೆ.
ಈ ಬಗ್ಗೆ ಕುಕಿ ವಿದ್ಯಾರ್ಥಿಗಳ ಸಂಘದ ನೇಮಚಾ ಕಿಪಜೆನ್ ಟ್ವೀಟ್ ಮಾಡಿ ಲಾಕಡೌನ್ ಸಂದರ್ಭದಲ್ಲಿ ಸಚಿವ ಸಿ.ಸಿ.ಪಾಟೀಲ್ ಸಹಾಯವನ್ನು ಸ್ಮರಿಸಿದ್ದಾರೆ.
