ನವದೆಹಲಿ : ದೇಶದ ಮೆಟ್ರೋ ನಗರಗಳು ರೆಡ್ ಜೋನ್ ನಲ್ಲಿ: ಆರೋಗ್ಯ ಸಚಿವಾಲಯ ನಿರ್ಧಾರ

ನವದೆಹಲಿ : ದೇಶದಲ್ಲಿನ ಎಲ್ಲ ಮೆಟ್ರೋ ನಗರಗಳನ್ನು ರೆಡ್ ಜೋನ್ ನಲ್ಲಿರಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನೂತನ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತಾ, ಬೆಂಗಳೂರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳು ಕೆಂಪು ವಲಯದಲ್ಲಿ ಸೇರ್ಪಡೆಗೊಂಡಿವೆ. ಮೇ. 3ರ ನಂತರ ಲಾಕ್‌ಡೌನ್ ತೆರೆಯುವ ಯೋಜನೆಗೆ ಇದು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ವ್ಯಾಪಾರ ವ್ಯವಹಾರಗಳಿಗೆ ಸರ್ಕಾರ ಅನುಕೂಲ ಮಾಡಿಕೊಡಲಿದೆಯೇ ಅಥವಾ ನಿಷೇಧ ಮುಂದುವರೆಯಲಿದೆಯೇ ಎಂಬುವುದುನ್ನು ಕಾದು ನೋಡಬೇಕಿದೆ.

ಜಿಲ್ಲೆಗಳನ್ನು ರೆಡ್ ಜೋನ್, ಆರೆಂಜ್ ಜೋನ್ ಹಾಗೂ ಗ್ರೀನ್ ಜೋನ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸದ್ಯ ಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತರು ಈ ರಾಜ್ಯದಲ್ಲಿಯೇ ಇದ್ದಾರೆ. ಹೀಗಾಗಿ ಮಹಾರಾಷ್ಟ್ರದ 14 ಜಿಲ್ಲೆಗಳನ್ನು ರೆಡ್ ಜೋನ್ ಗೆ ಸೇರ್ಪಡೆ ಮಾಡಲಾಗಿದೆ. ದೆಹಲಿಯಲ್ಲಿ 11 ಜಿಲ್ಲೆಗಳು, ತಮಿಳುನಾಡಿನಲ್ಲಿ 12 ಜಿಲ್ಲೆಗಳು, ಉತ್ತರ ಪ್ರದೇಶದ 19 ಜಿಲ್ಲೆಗಳು, ಪಶ್ಚಿಮ ಬಂಗಾಳದ 10 ಜಿಲ್ಲೆಗಳು, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ತಲಾ 9 ಜಿಲ್ಲೆಗಳು ಮತ್ತು ರಾಜಸ್ಥಾನದ 8 ಜಿಲ್ಲೆಗಳು ಕರ್ನಾಟಕದ 3 ಜಿಲ್ಲೆಗಳು ರೆಡ್ ಜೋನ್ ವ್ಯಾಪ್ತಿಯಲ್ಲಿವೆ.

Exit mobile version