ನಿನಗ ಕೈ ಮುಗಿತಿನಿ ಮನೆ ಹೋಗವ್ವ ಎಂದು ಮನವಿ ಮಾಡಿಕೊಂಡ ಪೊಲೀಸರು

ಬೆಳಗಾವಿ: ನಿನಗ ನಮಸ್ಕಾರ ಯವ್ವಾ.. ವಾಪಸ್ ಹೋಗವ್ವ.. ರಾತ್ರಿ ಇಡೀ ಸೊಳ್ಳಿ ಕಡಸ್ಕೋಂತ ಇಲ್ಲೆ ಮಲಗಿನಿ.. ಮನಿಗೆ ಹೋಗಿಬಿಡವ್ವ.. ಎಂದು ಎಎಸ್ಐ ಒಬ್ರು ಅನವಶ್ಯಕವಾಗಿ ದ್ವೀಚಕ್ರ ವಾಹನದಲ್ಲಿ ಓಡುಡುತ್ತಿದ್ದ ಮಹಿಳೆಗೆ ಮಾಡಿಕೊಂಡ ಮನವಿ. ದ್ವಿಚಕ್ರವಾಹನದಲ್ಲಿ ಬಂದ ಮಹಿಳೆಯರಿಗೆ ಕೈ ಮುಗಿದು ಬೇಡಿಕೊಮಡ ಘಟನೆ ಬೆಳಗಾವಿ ನಗರದ ಅಶೋಕ ವೃತ್ತದಲ್ಲಿ ನಡೆದಿದೆ.

ಇನ್ನು ಪರಿಪರಿಯಾಗಿ ಬೇಡಿಕೊಂಡಾಗಲೂ ಮಾತು ಕೇಳದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ್ರು. ಬೆಳಗಾವಿಯಲ್ಲಿ 55 ಕೊರೊನಾ ಪ್ರಕರಣ ಪತ್ತೆಯಾದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಗಡಿನಾಡು ಬೆಳಗಾವಿ ಹೆಬ್ಬಾಗಿಲಲ್ಲಿ ಕೋರೊನಾ ಹೆಚ್ಚುತ್ತಲೆ ಇದೆ. ಇಂದು ಒಂದೇ ದಿನ ಪತ್ತೆಯಾದ 14 ಕೋರೊನಾ ಪ್ರಕರಣ ಪತ್ತೆಯಾಗಿವೆ. ಹೀಗಾಗಿ ಕುಂದಾನಗರಿಗೆ ಮತ್ತೆ ಕಿಲ್ಲರ್ ಕೋರೊನಾ ವೈರಸ್ ಕಂಟಕವಾಗಿದೆ. ಒಂದೇ ದಿನ ಹಿರೇಬಾಗೇವಾಡಿಯಲ್ಲಿ 11 ಹಾಗೂ ಸಂಕೇಶ್ವರದಲ್ಲಿ 3 ಕೋರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈಗಾಗಲೇ ಬೆಳಗಾವಿ ರೆಡ್‌ಝೋನ್‌ನಲ್ಲಿ ಇದ್ದರೂ ಕುಂದಾನಗರಿ ಜನರು ಕ್ಯಾರೇ ಎನ್ನುತ್ತಿಲ್ಲ. ಅನಗತ್ಯವಾಗಿ ರಸ್ತೆಗಿಳಿಯುವವರನ್ನು ವಾಪಸ್ ಕಳಿಸಲು ಪೊಲೀಸರೇ ಸುಸ್ತಾದರು. ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲಿದ್ದರೂ ಜನರಲ್ಲಿ ಗಂಭೀರತೆ ಕಾಣದಿರುವುದು ವಿಪರ್ಯಾಸ.

Exit mobile version