ಲಾಕ್ ಡೌನ್ ಸಡಿಲಿಕೆಗೆ ಹಾವೇರಿ ಜನ ಡೋಂಟ್ ಕೇರ್

ಹಾವೇರಿ: ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟುಕೆಗಳಿಗೆ ಸಡಿಲಿಕೆ ನೀಡಲಾಗಿದೆ. ಆದ್ರೆ ಗ್ರೀನ್ ಝೋನ್ ಸಡಿಲಿಕೆಗೂ ಕೆಲವೊಂದು ನಿಯಮಗಳಿಗೆ ಹಾವೇರಿ ಜನ ಕ್ಯಾರೆ ಎನ್ನುತ್ತಿಲ್ಲ. ನಗರದ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿಯಾಗಿ ಜನರು ತಿರುಗಾಡುತ್ತಿರುವುದು ಕಂಡುಬಂದಿತು. ರಾಜ್ಯ ಸರ್ಕಾರದ ಆದೇಶ ಗಾಳಿಗೆ ತೂರಿ ವ್ಯಾಪಾರ ವಹಿವಾಟಿಗೆ ದಿನಸಿ ಆಂಗಡಿಗಳು ಮುಂದಾಗಿವೆ.

ಇನ್ನು ಕೆಲ ಅಂಗಡಿ ಮಾಲೀಕರಿಂದ, ವ್ಯಾಪರಸ್ಥರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆದಿತ್ತು. ಲಾಲ್ ಬಹದ್ದೂರ ಶಾಸ್ತ್ರೀ ಮಾರುಕಟ್ಟೆಯಲ್ಲಿಯೂ  ಜನಸಂಚಾರ ಗಿಜಿಗುಡುತ್ತಿತ್ತು. ಗುಂಪುಗುಂಪಾಗಿ ಸೇರಿ ಖರೀದಿಗೆ ಸಾರ್ವಜನಿಕರು ಮುಂದಾದದ ಸನ್ನಿವೇಶ ಸಾಮಾನ್ಯವಾಗಿತ್ತು. ಈಗಾಗಲೇ ಹಾವೇರಿ ಗ್ರೀನ್ ಝೋನ್ ನಲ್ಲಿರುವುದರಿಂದ ಜನರು ಈ ರೀತಿ ವರ್ತಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

Exit mobile version